Slide
Slide
Slide
previous arrow
next arrow

ಅ. 7 ಹಾಗೂ 8 ಕ್ಕೆ ಜಿಲ್ಲಾ ಯೋಗ ಶಿಕ್ಷಕರ ಪ್ರಶಿಕ್ಷಣ ವರ್ಗ ಶಿಬಿರ

300x250 AD

ಶಿರಸಿ: ಜಿಲ್ಲಾ ಯೋಗ ಫೆಡರೇಷನ್ ಹಾಗೂ ಆರೋಗ್ಯ ಭಾರತಿ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಉತ್ತರಕನ್ನಡ ಜಿಲ್ಲಾ ಯೋಗ ಶಿಕ್ಷಕರ ಉಚಿತ ಪ್ರಶಿಕ್ಷಣ ವರ್ಗ ಶಿಬಿರವನ್ನು ಅ.7 ಹಾಗೂ 8 ರಂದು ಶಿರಸಿಯ ಶ್ರೀ ವಿದ್ಯಾದಿರಾಜ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ವರ್ಗಕ್ಕೆ ಯೋಗ ಶಿಕ್ಷಕರು ಮಾತ್ರ ಅಪೇಕ್ಷಿತರಾಗಿದ್ದು, ವರ್ಗಕ್ಕೆ ಬರುವಂತಹ ಯೋಗ ಶಿಕ್ಷಕರು ತಮ್ಮ ಹೆಸರು, ಊರು ಹಾಗೂ ದೂರವಾಣಿಯ ಸಂಖ್ಯೆಯನ್ನು ಅ.5 ರ ಒಳಗಾಗಿ ನೋಂದಾಯಿಸಿಕೊಳ್ಳಬೇಕು. ಅಲ್ಲದೇ, ಈ ವರ್ಗಕ್ಕೆ ಬರುವವರು ಅ.7 ರ ಸಂಜೆ 4-00 ಗಂಟೆಗೆ ವರ್ಗ ಸ್ಥಾನ ತಲುಪಬೇಕು. 8ರ ಸಂಜೆ 5-00 ಗಂಟೆಗೆ ಮರಳಿ ಸ್ವಸ್ಥಾನಕ್ಕೆ ತೆರಳಬಹುದು. 

300x250 AD

ಪ್ರಶಿಕ್ಷಣ ವರ್ಗಕ್ಕೆ ಬರುವವರು ಬೆಲೆ ಬಾಳುವ ವಸ್ತುಗಳನ್ನು ತರಬಾರದು. ಅಲ್ಲದೇ, ಯೋಗಾಸನ ಅಭ್ಯಾಸಕ್ಕೆ ಬೇಕಾಗುವ ಯೋಗ ಉಡುಪುಗಳು ಹಾಗೂ ತಮ್ಮಲ್ಲಿ ಯೋಗ ಉಪಕರಣಗಳು ಇದ್ದರೆ ಅದನ್ನು ತೆಗೆದುಕೊಂಡು ಬರಬೇಕು. ಗರಿಷ್ಠ 30 ಯೋಗ ಶಿಕ್ಷಕರಿಗೆ ಅವಕಾಶವಿದೆ. ಈಗಾಗಲೇ 26 ಜನ ನೋಂದಾಯಿಸಿದ್ದು, ಅವರಿಗೆ ಪ್ರತ್ಯೇಕ ಗ್ರೂಪ್ ರಚಿಸಲಾಗಿದೆ. ಶಿಬಿರದಲ್ಲಿ ಊಟ, ವಸತಿಯ ಸೌಲಭ್ಯವಿರುತ್ತದೆ. ಸಂಪನ್ಮೂಲ ವ್ಯಕ್ತಿಗಳಾಗಿ ಆರ್‌ಎಸ್‌ಎಸ್‌ನ ಹಿರಿಯ ಯೋಗ ಸಾಧಕರು ಆಗಮಿಸಲಿದ್ದಾರೆ.

Share This
300x250 AD
300x250 AD
300x250 AD
Back to top