ಯಲ್ಲಾಪುರ: ತಾಲೂಕಿನ ಮಂಚಿಕೇರಿ ಅರಣ್ಯ ವಲಯ ವ್ಯಾಪ್ತಿಯ ಕುಂದರಗಿ ಶಾಖೆಯು ಭರತನಹಳ್ಳಿಯ ಪ್ರಗತಿ ವಿದ್ಯಾಲಯದಲ್ಲಿ 69ನೆಯ ವನ್ಯ ಜೀವಿ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಗತಿ ಪ್ರೌಢಶಾಲೆಯ ಮುಖ್ಯಪಾಧ್ಯಾಪಕ ವಿನಾಯಕ ಹೆಗಡೆ ಹಾಗೂ ಶಿಕ್ಷಕ ವೃಂದ, ಕುಂದರಗಿ ಉಪ ವಲಯಾರಣ್ಯಾಧಿಕಾರಿ ಕಲ್ಲಪ್ಪ ಬರದೂರ, ಬಿಳಕಿ ಶಾಖೆಯ ಮಂಜುನಾಥ ಅಗೇರ, ಮಂಚಿಕೇರಿ ಶಾಖೆಯ ಪವನ ಲೋಕೂರ, ಸಂತೋಷ ಪವಾರ್, ಗಸ್ತು ಅರಣ್ಯಪಾಲಕರಾದ ಭೀಮಾಶಂಕರ ಯಾರ್ಜರಿ, ಪ್ರಶಾಂತ ಅಜರೆಡ್ಡಿ. ಶಂಕರ. ಬಸವರೆಡ್ಡಿ. ತಾರಾ. ಕ್ಷೇಮಾಭಿವೃದ್ಧಿ ನೌಕರ ಚಂದ್ರು ನಾಯಕ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಗತಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೇ ಉಪಸ್ಥಿತರಿದ್ದ ಅಧಿಕಾರಿಗಳು ವನ್ಯ ಜೀವಿಗಳ ಮಹತ್ವ, ವನ್ಯ ಜೀವಿಗಳ ಅವಾಸಸ್ಥಾನ, ವನ್ಯ ಜೀವಿಗಳು ಉಳಿವು, ಅಳಿವಿನಂಚಿನಲ್ಲಿರುವ ಪ್ರಾಣಿಗಳು ಮತ್ತು ಅರಣ್ಯದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.