Slide
Slide
Slide
previous arrow
next arrow

ಭಾರತಕ್ಕೆ 13ನೇ ಚಿನ್ನ : ಶಾಟ್ಪುಟ್‌ನಲ್ಲಿ ಸ್ವರ್ಣ ಗೆದ್ದ ‘ತಜಿಂದರ್ಪಾಲ್ ಸಿಂಗ್ ತೂರ್’

300x250 AD

ಹ್ಯಾಂಗ್ಝೌನ್ : ಏಷ್ಯನ್ ಗೇಮ್ಸ್ 2023 ರ ಪುರುಷರ ಶಾಟ್ಪುಟ್ ಫೈನಲ್ ಸ್ಪರ್ಧೆಯಲ್ಲಿ ಭಾರತದ ಅಥ್ಲೀಟ್ ತಜಿಂದರ್ಪಾಲ್ ಸಿಂಗ್ ತೂರ್ ಚಿನ್ನ ಗೆದ್ದಿದ್ದು, ಈ ಮೂಲಕ ದೇಶಕ್ಕೆ 13 ನೇ ಚಿನ್ನದ ಪದಕ ಸೇರಿದೆ.

ಇನ್ನು ಇದಕ್ಕು ಮುನ್ನ ಪುರುಷರ 300 ಮೀಟರ್ ಸ್ಟೀಪಲ್ಚೇಸ್ ಸ್ಪರ್ಧೆಯಲ್ಲಿ ಅವಿನಾಶ್ ಸಾಬ್ಲೆ ಚಿನ್ನದ ಪದಕ ಗೆದ್ದಿದ್ದಾರೆ. ಇನ್ನು ಮಹಿಳೆಯರ 50 ಕೆಜಿ ವಿಭಾಗದ ಸೆಮಿಫೈನಲ್’ನಲ್ಲಿ ಬಾಕ್ಸರ್ ನಿಖಾತ್ ಝರೀನ್ ಸೋಲಾನುಭವಿಸಿದ್ದು, ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

ಮತ್ತೊಂದೆಡೆ, ಪುರುಷರ ತಂಡ ಬ್ಯಾಡ್ಮಿಂಟನ್ ಫೈನಲ್ನಲ್ಲಿ ಭಾರತವು ಚೀನಾ ವಿರುದ್ಧ 1-0 ಮುನ್ನಡೆ ಸಾಧಿಸಿದೆ, ಲಕ್ಷ್ಯ ಸೇನ್ ಆರಂಭಿಕ ಪಂದ್ಯವನ್ನು ಗೆದ್ದಿದ್ದಾರೆ. ಇದಕ್ಕೂ ಮುನ್ನ ಏಷ್ಯನ್ ಗೇಮ್ಸ್ ನ ಪುರುಷರ 50 ಮೀಟರ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದ ಕಿನಾನ್ ಡೇರಿಯಸ್ ಚೆನೈ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟರು.

300x250 AD

ಡೇರಿಯಸ್ ಈ ಹಿಂದೆ ಪುರುಷರ ಟ್ರ್ಯಾಪ್ ಫೈನಲ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಭಾನುವಾರ ಮಹಿಳಾ ವೈಯಕ್ತಿಕ ಸುತ್ತಿನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟರು. ಅಲ್ಲದೆ, ಮಹಿಳಾ ತಂಡವು 25 ಮೀಟರ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿತು.

Share This
300x250 AD
300x250 AD
300x250 AD
Back to top