ಕಾರವಾರ: ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ವಿವಿಧ ರೀತಿಯ ಪಿಂಚಣಿಗಳನ್ನು ಜಿಲ್ಲೆಯಲ್ಲಿ ಒಟ್ಟು 1,58,427 ಫಲಾನುಭವಿಗಳಿಗೆ ಈಗಾಗಲೇ ವಿತರಿಸಲಾಗುತ್ತಿದ್ದು, ಸದ್ರಿ ಪಿಂಚಣಿಯನ್ನು ಸಂಬAಧಿಸಿದ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗಿರುತ್ತದೆ.
ಅಕ್ಟೋಬರ್ 2023 ರಿಂದ ಸಾಮಾಜಿಕ ಭದ್ರತಾ ಯೋಜನೆ & ಪಿಂಚಣಿಗಳ ನಿರ್ದೇಶನಾಲಯವು ಫಲಾನುಭವಿಗಳಿಗೆ ಪಾವತಿಸುತ್ತಿರುವ ಪಿಂಚಣಿಯನ್ನು ಆಧಾರ್ ಕಾರ್ಡ್ ಅಧಾರಿತ ಪಾವತಿಯನ್ನಾಗಿಸಲು ತೀರ್ಮಾನಿಸಲಾಗಿದ್ದು, ಆಧಾರ್ ನಂಬರನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದೇ ಇರುವ, ಎನ್.ಪಿ.ಸಿ.ಐ. ಮ್ಯಾಪಿಂಗ್ ಆಗದೇ ಇರುವ ಹಾಗೂ ಬ್ಯಾಂಕ್ ಅಂಚೆ ಚಾಲನೆಯಲ್ಲಿಲ್ಲದಿರುವ ಖಾತೆಗಳಿಗೆ ಪಿಂಚಣಿ ಪಾವತಿಯಾಗುವುದಿಲ್ಲ.
ಜಿಲ್ಲೆಯಲ್ಲಿ ಅಂತಹ ಒಟ್ಟು 4,081 ಫಲಾನುಭವಿಗಳಿದ್ದು, ಸದರಿ ಫಲಾನುಭವಿಗಳ ಪಟ್ಟಿಯನ್ನು ನಿರ್ದೇಶನಾಲಯದಿಂದ ಕಳುಹಿಸಿಕೊಡಲಾಗಿದ್ದು, ತಾಲ್ಲೂಕುವಾರು ಕಾರವಾರ 342 ಅಂಕೋಲಾ-202, ಕುಮಟಾ-339, ಹೊನ್ನಾವರ-554, ಭಟ್ಕಳ-510, ಶಿರಸಿ-395, ಸಿದ್ದಾಪುರ 143, ಯಲ್ಲಾಪುರ 24 ಮುಂಡಗೋಡ -405, ಹಳಿಯಾಳ-16, ಜೋಯಿಡಾ-234, ದಾಂಡೇಲಿ-402 ಫಲಾನುಭವಿ ಹೆಸರು ಹಾಗೂ ಮಾಹಿತಿಯು ಸಂಬAಧಿಸಿದ ತಾಲ್ಲೂಕು ಕಛೇರಿಗಳಲ್ಲಿ ಲಭ್ಯವಿದ್ದು, ಪಟ್ಟಿಯಲ್ಲಿರುವ ಫಲಾನುಭವಿಗಳು ತಮ್ಮ ಖಾತೆ ಇರುವ ಬ್ಯಾಂಕ್, ಅಂಚೆ ಕಛೇರಿಗೆ ತೆರಳಿ ತುರ್ತಾಗಿ ತಮ್ಮ ಆಧಾರ್ ನಂಬರನ್ನು ಬ್ಯಾಂಕ್ ಖಾತೆಗೆ ಲಿಂಕ್, ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸುವ ಬಗ್ಗೆ ಹಾಗೂ ಬ್ಯಾಂಕ್/ ಅಂಚೆ ಕಛೇರಿ ಖಾತೆಯು ಚಾಲನೆಯಲ್ಲಿಲ್ಲದಿದ್ದರೆ ಸದರಿ ಖಾತೆಯನ್ನು ಚಾಲನೆ ಮಾಡಿಸುವ ಬಗ್ಗೆ ಕ್ರಮವಹಿಸಬೇಕಾಗಿರುತ್ತದೆ. ಸದರಿ ಕಾರ್ಯವನ್ನು ಮಾಡಿಸದೇ ಇದ್ದಲ್ಲಿ ಪಿಂಚಣಿಯು ಸಂಬ0ಧಿಸಿದ ಫಲಾನುಭವಿಗಳ ಖಾತೆಗೆ ಜಮಾ ಆಗದೇ ಇರುವ ಸಾಧ್ಯತೆ ಇರುವುದರಿಂದ ಸದರಿ ಫಲಾನುಭವಿಗಳು ತ್ವರಿತಗತಿಯಲ್ಲಿ ಸೆ.30ರೊಳಗಾಗಿ ಮುಕ್ತಾಯಗೊಳಿಸಲು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.