ಶಿರಸಿ: “ವಿಶ್ವ ಹೃದಯ ದಿನ”ದ ಅಂಗವಾಗಿ ಇಲ್ಲಿನ ಪ್ರತಿಷ್ಠಿತ ಟಿಎಸ್ಎಸ್ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ, ಎಸ್.ಡಿ.ಎಮ್. ನಾರಾಯಣ ಹಾರ್ಟ್ ಸೆಂಟರ್ ಇವರ ಸಹಭಾಗಿತ್ವದಲ್ಲಿ ಸೆ.29ರಂದು ‘ಉಚಿತ ಹೃದಯ ತಪಾಸಣಾ ಶಿಬಿರ’ವನ್ನು ಏರ್ಪಡಿಸಲಾಗಿತ್ತು.
ಆಗಮಿಸಿದ ಶಿಬಿರಾರ್ಥಿಗಳಿಂದಲೇ ದೀಪ ಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು. ಶಿಬಿರದಲ್ಲಿ ಟಿಎಸ್ಎಸ್ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರು ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಜೀವನ ಶೈಲಿಯ ಬಗ್ಗೆ ಮಾಹಿತಿ ನೀಡಿದರು.
ನಂತರದಲ್ಲಿ ಎಸ್.ಡಿ.ಎಮ್ ನಾರಾಯಣ ಹಾರ್ಟ್ ಸೆಂಟರ್’ನ ತಜ್ಞ ವೈದ್ಯರು ಅಗತ್ಯವಾದ ಪರೀಕ್ಷೆಗಳನ್ನು ಮಾಡಿ ಶಿಬಿರಾರ್ಥಿಗಳೊಂದಿಗೆ ಉಚಿತವಾಗಿ ಸಮಾಲೋಚನೆ ನಡೆಸಿ ಸಲಹೆ ನೀಡಿದರು. 128 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಂಡರು.