Slide
Slide
Slide
previous arrow
next arrow

ರಸ್ತೆಯ ಅಂಚಿನಲ್ಲಿ ಮೀನು ಮಾರಾಟಕ್ಕೆ ಗ್ರಾಮಸ್ಥರ ಆಕ್ಷೇಪ; ಮನವಿ ಸಲ್ಲಿಕೆ

300x250 AD

ಯಲ್ಲಾಪುರ: ತಟಗಾರ-ಹುಟಕಮನೆ ಮುಖ್ಯ ರಸ್ತೆಯ ತಟಗಾರ ಕ್ರಾಸ್ ಅಂಚಿನಲ್ಲಿ ಇತ್ತೀಚೆಗೆ ಅನಧಿಕೃತವಾಗಿ ಕೆಲವರು ಮೀನು ಮಾರಾಟ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ತಟಗಾರ್, ಹುಟಕಮನೆ, ಶೀಗೆಪಾಲ ಗ್ರಾಮಸ್ಥರು ಬುಧವಾರ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮೀನು ಮಾಂಸ ಮಾರಾಟಕ್ಕೆಂದೇ ಪಟ್ಟಣದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಇದೆ. ಕೆಲವು ಮೀನು ವ್ಯಾಪಾರಿಗಳು, ತಟಗಾರ ಮುಖ್ಯ ರಸ್ತೆಯ ಅಂಚಿನಲ್ಲಿ ಅನಧಿಕೃತವಾಗಿ ಮೀನು ಮಾರಾಟ ಮಾಡುತ್ತಿರುವುದರಿಂದ ದುರ್ವಾಸನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ರಸ್ತೆಯಲ್ಲಿ ಪಾದಚಾರಿಗಳಿಗೆ ಮತ್ತು ವಾಹನ ಸಂಚಾರಕ್ಕೂ ತೀವ್ರ ಅಡಚಣೆಯಾಗುತ್ತಿದೆ. ಎಂದು ಮನವಿಯಲ್ಲಿ ತಿಳಿಸಲಾಗಿದೆ. ಗ್ರಾಮಸ್ಥರಿಂದ ಮನವಿಯನ್ನು ಸ್ವೀಕರಿಸಿದ ಶಾಸಕ ಶಿವರಾಮ ಹೆಬ್ಬಾರ್ ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

300x250 AD

ಪಟ್ಟಣ ಪಂಚಾಯತಿ ಎಂಜನೀಯರ್ ಹೇಮಚಂದ್ರ ನಾಯ್ಕ, ಸಮೂಹ ಸಂಪನ್ಮೂಲ ಅಧಿಕಾರಿ ಹೇಮಾವತಿ ಭಟ್ಟ, ಗ್ರಾಮಸ್ಥರಾದ ನರಸಿಂಹ ಭಟ್ ಬೋಳ್ಪಾಲು, ಅನಂತ ಭಟ್, ನಾಗೇಶ ಭಟ್, ವಿಶ್ವನಾಥ ಭಟ್, ಮಂಜುನಾಥ ಭಟ್ಟ, ಅನಂತ ಭಟ್ಟ, ಅನಂತ ತಿಮ್ಮಣ್ಣ ಭಟ್, ಮಂಜುನಾಥ ಭಟ್ ಕೊಂಬೆಪಾಲು, ಕೃಷ್ಣ ಭಟ್ ಬದ್ನೆಪಾಲು ಮುಂತಾದವರು ಇದ್ದರು.

Share This
300x250 AD
300x250 AD
300x250 AD
Back to top