ಹೊನ್ನಾವರ: ವಿದೇಶದಲ್ಲಿಯೂ ವಿಘ್ನ ನಿವಾರಕ ವಿಘ್ನೇಶ್ವರ ಪೂಜೆ ನಡೆಸಿದ ಕನ್ನಡತಿಯ ವಿಡಿಯೋ ವೈರಲ್ ಆಗಿದ್ದು, ಹೊನ್ನಾವರದ ಮಹಿಳೆಯ ಸಂಪದ್ರಾಯಬದ್ಧವಾದ ಗಣೇಶ ಚತುರ್ಥಿ ಆಚರಣೆಯ ಕುರಿತು ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹಿಂದು ಸಂಪ್ರದಾಯದಲ್ಲಿ ಗಣಪತಿ ಹಬ್ಬ ಅದ್ಧೂರಿಯಾಗಿ ಕುಟುಂಬದವರೆಲ್ಲ ಒಟ್ಟಾಗಿ ಸೇರಿ ಆಚರಿಸುವ ಹಬ್ಬವಾಗಿದೆ. ಮನೆ ಮಂದಿಯೆಲ್ಲ ಸೇರಿ ವಿವಿಧ ರೀತಿಯ ತಿಂಡಿತಿಸಿಸುಗಳನ್ನು ಮಾಡಿ ಒಟ್ಟಾಗಿ ಹಬ್ಬ ಆಚರಿಸುತ್ತಾರೆ. ಆದರೆ ದೂರದ ಊರನಲ್ಲಿದ್ದವರು ಇಂದು ಸಂಪ್ರದಾಯಬದ್ದ ಆಚರಣೆ ಮರೆಯುತ್ತಾರೆ ಎನ್ನುವ ಆಪಾದನೆ ಇದೆ ಆದರೆ ಅದಕ್ಕೆ ವ್ಯತಿರಿಕ್ತವಾಗಿ ದೂರದ ಅಮೇರಿಕಾದಲ್ಲಿರುವ ಹೊನ್ನಾವರ ಮೂಲದ ಮಹಿಳೆಯೊರ್ವರು ತಮ್ಮ ಕುಟುಂಬದ ಜೊತೆ ದೇಶದ ಇತರೆ ಸ್ನೇಹಿತರೊಂದಿಗೆ ಹಬ್ಬ ಆಚರಿಸಿದ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದೆ. ಮುಂಬೈಯಲ್ಲಿ ಹುಟ್ಟಿ ಬೆಳೆದ ಋತು ರಾಜೀವನ್ ಅಮೆರಿಕದ ಬಲ್ಟಿಮೋರ್‌ನಲ್ಲಿ ಎಂಎಸ್ ಮುಗಿಸಿ ಪಿಎಚ್.ಡಿ ಮಾಡುತ್ತಿದ್ದಾರೆ. ಇವರು ಕೇರಳ ಮೂಲದವರಾದರು, ಹೊನ್ನಾವರದಲ್ಲಿ ಇವರ ಅಜ್ಜ ಹಾಗೂ ತಂದೆ ಪಟ್ಟಣದ ಪ್ರಭಾತನಗರದಲ್ಲಿ ಹಲವು ವರ್ಷಗಳ ಕಾಲ ವಾಸವಿದ್ದರು.
ಮಮತಾ ಮತ್ತು ರಾಜೀವನ ಕುಟುಂಬ ಮುಂಬೈಗೆ ತೆರಳಿದ ಬಳಿಕ ಅಲ್ಲಿ ವಾಸವಿದ್ದರು. ಇವರು ಪ್ರತಿವರ್ಷ ಗಣೇಶ ಚತುರ್ಥಿ ಆಚರಿಸುತ್ತಿದ್ದು, ಈ ಬಾರಿಯು ತಳಿರುತೋರಣದಿಂದ ಸಿಂಗರಿಸಿ, ಹಿಂದು ಸಂಪದ್ರಾಯದಲ್ಲಿ ಮಣ್ಣಿನ ಗಣೇಶಮೂರ್ತಿ ತಂದು ಹೂವಿನಿಂದ ಅಲಂಕಾರ ಮಾಡಿ ಸುತ್ತಮುತ್ತಲು ವಾಸವಿರುವ ದೇಶಿಯ ಸ್ನೇಹಿತರನ್ನು ಅಮಂತ್ರಿಸಿ ಚಕ್ಕುಲಿ ಸೇರಿಸಿದಂತೆ ವಿವಿಧ ತಿಂಡಿ ತಿನಿಸುಗಳನ್ನು ಮಾಡಿ ಪೂಜೆ ನೇರವೇರಿಸಿ ವಿಸರ್ಜನೆ ಮಾಡಿರುವ ವಿಡಿಯೋ ಎಲ್ಲಡೆ ವೈರಲ್ ಆಗಿದ್ದು, ನಮ್ಮ ಭಾರತೀಯ ಸಂಸ್ಕ್ರತಿಯನ್ನು ವಿದೇಶದಲ್ಲಿ ಪಸರಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.