ಶಿರಸಿ: ಸೋಂದಾ ಸ್ವರ್ಣವಲ್ಲೀ ಶ್ರೀಗಳ 33 ನೇ ಪೀಠಾರೋಹಣ ಸಮಾರಂಭದ ಪ್ರಯುಕ್ತ ರಾಗ ಮಿತ್ರ ಪ್ರತಿಷ್ಠಾನದ ವತಿಯಿಂದ ಅ.2, ಸೋಮವಾರದಂದು ಯೋಗ ಮಂದಿರದ ಸರ್ವಜ್ಞೇಂದ್ರ ಸರಸ್ವತಿ ಸಭಾಭವನದಲ್ಲಿ ಗುರು ಅರ್ಪಣೆ – ಕಲಾ ಅನುಬಂಧ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಾಯಂಕಾಲ 5-30 ರಿಂದ ಪ್ರಾರಂಭವಾಗುವ ಸಭಾ ಕಾರ್ಯಕ್ರಮವನ್ನು ಮಹಾಲಕ್ಷ್ಮೀ ಮೆಮೋರಿಯಲ್ ಆಸ್ಪತ್ರೆಯ ಡಾ.ಸುಮನ್ ದಿನೇಶ ಹೆಗಡೆ ಉದ್ಘಾಟಿಸಲಿದ್ದಾರೆ. ಹಿರಿಯ ಸಂಗೀತ ಅಭಿಮಾನಿ ಆರ್.ಎನ್.ಭಟ್ಟ ಸುಗಾವಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜು ಎಮ್. ಶೇಟ್ ಹಾಗೂ ಎಂ.ಎನ್.ಹೆಗಡೆ ಮಾಳೇನಳ್ಳಿ ಉಪಸ್ಥಿತರಿರಲಿದ್ದಾರೆ. ತಬಲಾ ಕಲಾವಿದ ವಿ.ಎಂ.ಜಿ.ಭಟ್ಟ ನೆಬ್ಬೂರು ಅವರಿಗೆ ಗೌರವ ಸನ್ಮಾನ ನಡೆಯಲಿದೆ.
ನಂತರ ಜರುಗುವ ಸಂಗೀತ ಕಾರ್ಯಕ್ರಮದಲ್ಲಿ ಸ್ಪಂದನಾ ಮಹಿಳಾ ಮಂಡಳದ ಸದಸ್ಯರಿಂದ ಭಕ್ತಿ ಸಂಗೀತ, ವಿ. ಭಾರ್ಗವರಾವ್ ಅವರಿಂದ ಬಾನ್ಸುರಿ ವಾದನ, ಮೇಧಾ ಭಟ್ಟ ಅಗ್ಗೆರೆ ಅವರಿಂದ ಹಿಂದೂಸ್ತಾನಿ ಗಾಯನ, ಗಣೇಶ ಗುಂಟ್ಕಲ್ ತಬಲಾ ಹಾಗೂ ಪ್ರಕಾಶ ಹೆಗಡೆ ಯಡಳ್ಳಿ ಅವರಿಂದ ಹಾರ್ಮೋನಿಯಂ ವಾದನ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ರಾಗ ಮಿತ್ರ ಪ್ರತಿಷ್ಠಾನ ವಿನಂತಿಸಿದೆ.