ನವದೆಹಲಿ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮೂರು ಬೆಳ್ಳಿ ಮತ್ತು ಎರಡು ಕಂಚು ಗೆದ್ದುಕೊಂಡಿದೆ.
ಶೂಟಿಂಗ್‌ನಲ್ಲಿ, ಮೆಹುಲಿ ಘೋಷ್, ರಮಿತಾ ಮತ್ತು ಆಶಿ ಚೌಕ್ಸೆ ಅವರನ್ನೊಳಗೊಂಡ ಭಾರತದ ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡವು 1886 ಸಾಮೂಹಿಕ ಸ್ಕೋರ್‌ನೊಂದಿಗೆ ಬೆಳ್ಳಿ ಪದಕವನ್ನು ಪಡೆದರು. ವೈಯಕ್ತಿಕ ವಿಭಾಗದಲ್ಲಿ ರಮಿತಾ ಜಿಂದಾಲ್ ಸಹ ಇದೇ ಸ್ರ‍್ಧೆಯಲ್ಲಿ ಕಂಚಿನ ಪದಕವನ್ನು ಪಡೆದರು.
ರೋಯಿಂಗ್, ಲೈಟ್‌ವೇಟ್ ಪುರುಷರ ಡಬಲ್ ಸ್ಕಲ್ಸ್ ಸ್ರ‍್ಧೆಯಲ್ಲಿ ಭಾರತ ಬೆಳ್ಳಿ ಪದಕವನ್ನು ಖಚಿತಪಡಿಸಿದೆ. ಭಾರತವನ್ನು ಪ್ರತಿನಿಧಿಸುತ್ತಿರುವ ರ‍್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ 06:28:18 ಸಮಯದೊಂದಿಗೆ ಎರಡನೇ ಸ್ಥಾನ ಪಡೆದರು. ಪುರುಷರ ಎಂಟರ ಸ್ರ‍್ಧೆಯಲ್ಲಿ ದೇಶ ಬೆಳ್ಳಿ ಪದಕವನ್ನೂ ಗೆದ್ದುಕೊಂಡಿತು.
ರೋಯಿಂಗ್‌ನ ಇನ್ನೊಂದು ಸ್ರ‍್ಧೆಯಲ್ಲಿ ಭಾರತದ ಜೋಡಿ ಬಾಬು ಲಾಲ್ ಯಾದವ್ ಮತ್ತು ಲೇಖ್ ರಾಮ್ ಕಂಚಿನ ಪದಕ ಪಡೆದರು. ಇದೀಗ ಭಾರತವು ಐದು ಪದಕಗಳೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.