ಕುಮಟಾ: ಪಟ್ಟಣದ ಚಿತ್ರಗಿ ಸ್ಟೂಡೆಂಟ್ ವೆಲ್ಫೇರ್ ಟ್ರಸ್ಟ್ನ ಸಾಮಾಜಿಕ ಕಾರ್ಯಗಳಿಗಾಗಿ ಚಿತ್ರಿಗಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿನಿ ಗೋಕರ್ಣದ ಉಮಾ ಶಂಕರಲಿ0ಗ್ ಅವರು ಆರ್ಥಿಕ ನೆರವು ನೀಡಿದರು.
ಚಿತ್ರಿಗಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ರಚಿಸಿಕೊಂಡ
ಚಿತ್ರಗಿ ಸ್ಟೂಡೆಂಟ್ ವೆಲ್ಪರ್ ಟ್ರಸ್ಟ್ ವತಿಯಿಂದ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಬಗ್ಗೆ ಮಾಹಿತಿ ಪಡೆದ ಶಾಲೆಯ ಹಳೆಯ ವಿದ್ಯಾರ್ಥಿನಿ ಗೋಕರ್ಣದ ಉಮಾ ಶಂಕರಲಿ0ಗ್ ಅವರು ಟ್ರಸ್ಟ್ನ ಸಾಮಾಜಿಕ ಕಾರ್ಯಗಳಿಗೆ ನೆರವಾಗಲೆಂದು ಆರ್ಥಿಕ ನೆರವು ನೀಡುವ ಮೂಲಕ ಟ್ರಸ್ಟ್ನ ಸೇವಾ ಕಾರ್ಯಗಳಿಗೆ ಪ್ರೋತ್ಸಾಹ ನೀಡಿದರು.
ಈ ಸಂದರ್ಭದಲ್ಲಿ ಟ್ರಸ್ಟಿನ ಹಿರಿಯ ಸದಸ್ಯರಾದ ಸುರೇಶ್ ಭಟ್ರವರು ಉಮಾ ಶಂಕಲಿ0ಗ ಮತ್ತು ಭಾಗ್ಯಲಕ್ಷ್ಮಿ ಶಂಕರ್ ಲಿಂಗ ಅವರನ್ನು ಪರಿಚಯಿಸಿದರು. ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಶೇಷಗಿರಿ ಶಾನಭಾಗ, ಚಿತ್ರಗಿ ಸ್ಟೂಡೆಂಟ್ ವೆಲ್ಫೇರ್ ಟ್ರಸ್ಟಿನ ಅಧ್ಯಕ್ಷರಾದ ಉದಯ್ ಹುಲಸ್ವಾರ್, ಎಸ್ಡಿಎಂಸಿ ಅಧ್ಯಕ್ಷರಾದ ಬಾಲಚಂದ್ರ ಭಟ್, ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿ ವಿನಾಯಕ್, ಟ್ರಸ್ಟಿನ ಸದಸ್ಯರಾದ ನಾಗರಾಜ್ ನಾಯ್ಕ್ , ಶಂಕರ್ ನಾಯ್ಕ, ಸುರೇಶ್ ಭಟ್ ಮತ್ತು ಶಾಲೆಯ ಮುಖ್ಯಸ್ಥರಾದ ಪಾಂಡುರAಗ ಇದ್ದರು.