ಶಿರಸಿ: ಸಂವಿಧಾನ ಉಳಿದರೆ ಮಾತ್ರ ದೇಶ ಉಳಿಯುವುದು. ಸಂವಿಧಾನ ಅಧ್ಯಯನದ ಮೂಲಕ ಸಾರ್ವತ್ರಿಕ ಹಕ್ಕನ್ನು ಪಡೆದುಕೊಳ್ಳಲು ಸಾಧ್ಯ. ಸಂವಿಧಾನ ಅಧ್ಯಯನಕ್ಕೆ ಪ್ರಾಮುಖ್ಯತೆ ನೀಡಿ ಎಂದು ಕರ್ನಾಟಕ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಅಧ್ಯಕ್ಷ ಬಿ.ಎನ್.ವಾಸರೆ ಹೇಳಿದರು.
ಸಂವಿಧಾನ ಓದು ಅಭಿಯಾನದ ಎರಡು ದಿನದ ಜಿಲ್ಲಾಮಟ್ಟದ ಕಾರ್ಯಾಗಾರವನ್ನ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ದೇಶದಲ್ಲಿ ಸಂವಿಧಾನ ತಿರುಚುವ ಮತ್ತು ತಿದ್ದುವ ಕಾರ್ಯಕ್ಕೆ ಪ್ರಯತ್ನ ಜರುಗುತ್ತಿರುವುದು ವಿಷಾದಕರ. ಸಂವಿಧಾನ ತಿಳಿಯುವುದರಿಂದ ಹಕ್ಕಿನ ವಂಚಿತಕ್ಕೆ ಅವಕಾಶವಿಲ್ಲ. ಸಂವಿಧಾನದ ಅರಿವಿನಿಂದ ರಾಜಕೀಯ ಮತ್ತು ಸಾಮಾಜಿಕ ಹಕ್ಕನ್ನು ಪಡೆಯಲು ಪ್ರಯತ್ನಿಸಬೇಕೆಂದು ಅವರು ಹೇಳಿದರು.
ಸಂವಿಧಾನ ಅರಿವು ಬದುಕಿನ ದಾರಿ ತಿಳಿಸುವುದು. ಇಂದು ಸಂವಿಧಾನವನ್ನು ಅಸ್ಪಶ್ರತೆಯ ಭಾವನೆಯಿಂದ ನೋಡುವ ಭಾವನೆ ಬದಲಾಗಬೇಕು. ಜಾತಿ ವ್ಯವಸ್ಥೆ ಅಡ್ಡ ಗೋಡೆಯಾಗಿದ್ದು, ಜಾತಿ ವ್ಯವಸ್ಥೆಯಿಂದ ಬಂದಾಗಲೂ ಅವಕಾಶ ಕಡಿಮೆಯಾಗಿದೆ. ಜಾತಿ ವ್ಯವಸ್ಥೆ ಹೋಗದೆ ದೇಶ ಬದಲಾಗಲು ಸಾಧ್ಯವಿಲ್ಲ ಎಂದು ಸಾಹಿತಿ ಮಾಧವಿ ಭಂಡಾರಿ ಹೇಳಿದರು
ಕಾರ್ಯಕ್ರಮದಲ್ಲ್ಲಿ ಹಿರಿಯ ವಕೀಲ ರವೀಂದ್ರ ನಾಯ್ಕ, ಡಿ ಸ್ಯಾಮಸನ್, ಡಿ.ವೈ.ಎಫ್. ಐ. ಉಪಸ್ಥಿತರಿದ್ದರು. ರಾಜಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸ್ವಾಗತ ಮತ್ತು ಪ್ರಸ್ತಾವನೆ ವಕೀಲ ಅನಂತ ನಾಯ್ಕ ನಿರ್ವಹಿಸಿದರು. ಜಿಲ್ಲಾದ್ಯಂತ ವಿವಿಧ ಸಂಘಟನೆಗಳಿAದ ೧೩೦ ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.
೨೫ ಲಕ್ಷ ಪುಸ್ತಕ ಮುದ್ರಣ: ನ್ಯಾಯಮೂರ್ತಿ ಹೆಚ್ ಏನ್ ನಾಗಮೋಹನ್ ದಾಸ್ ಬರಹದ ಸಂವಿಧಾನ ಓದು ಪುಸ್ತಕ ೫೦ ಭಾರಿ ಮುದ್ರಣಗೊಂಡು ಕನ್ನಡ, ಹಿಂದಿ, ಮಲಿಯಾಳಮ್, ಇಂಗ್ಲಿಷ್, ಭಾಷೆಗಳಲ್ಲಿ ಒಟ್ಟು ೨೫ ಲಕ್ಷ ಮುದ್ರಣಗೊಂಡಿರುವುದು ವಿಶೇಷತೆ ಎಂದು ಬಿ. ಎನ್ ವಾಸರೆ ಹೇಳಿದರು.