Slide
Slide
Slide
previous arrow
next arrow

“ಆಚಾರ್ಯರತ್ನ ಪ್ರಶಸ್ತಿ” ವಿಜೇತ ಡಾ.ಬಾಲಕೃಷ್ಣ ಹೆಗಡೆಗೆ ಸನ್ಮಾನ

300x250 AD

ಶಿವಮೊಗ್ಗ: ಭಾರತದಲ್ಲಿ ಸೇವೆಗೆ ಪ್ರಾಚೀನ ಇತಿಹಾಸವಿದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಸೇವೆಯ ಉಲ್ಲೇಖವಿದೆ. ದಾನ ಸೇವೆಯ ಪ್ರತಿರೂಪ ಎಂದು ‘ಆಚಾರ್ಯರತ್ನ ಪ್ರಶಸ್ತಿ’ ವಿಜೇತ ಡಾ.ಬಾಲಕೃಷ್ಣಹೆಗಡೆ ಹೇಳಿದರು.

ರೋಟರಿ ಶಿವಮೊಗ್ಗ ಜ್ಯೂಬಿಲಿ ಆಯೋಜಿಸಿದ ಸನ್ಮಾನ ಸ್ವೀಕರಿಸಿ, ಅವರು ಮಾತನಾಡುತ್ತಿದ್ದರು. ಶ್ರಮದಾನ, ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವ ಕೆಲಸ. ನನಗಲ್ಲ-ನಿನಗೆ ಎಂಬುದೆ ಸಮಾಜಸೇವೆ. ಸ್ವಾರ್ಥಿಗಳು ಏಕಾಂಗಿಯಾಗಿರುತ್ತಾರೆ. ಸ್ವ-ಹಿತ ಮೀರಿದ ಸೇವೆಯಿಂದ ರೋಟರಿ ವಿಶ್ವದಲ್ಲಿಯೇ ಹೆಸರುವಾಸಿಯಾಗಿದೆ. ಕುಗ್ರಾಮದ ಅನಕ್ಷರಸ್ತ ಮಹಿಳೆ ತುಳಸಿ ಗೌಡರನ್ನು ರಾಷ್ಟ್ರ ಗುರುತಿಸಿದ್ದು ಅವರ ನಿಸ್ವಾರ್ಥ ಸೇವೆಯಿಂದ. ನಾವು ಮಾಡುವ ಸೇವಾ ಕಾರ್ಯವನ್ನು ಗುರುತಿಸಿ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ. ಸನ್ಮಾನಗಳು ನಮ್ಮ ಜವಾಬ್ದಾರಿ ಹೆಚ್ಚಿಸುತ್ತವೆ ಎಂದರು.

ಶಿಕಾರಿಪುರದ ರಾಂಗನಾಥರಾವ್ (ಎಸ್.ಆರ್.ರಾವ್) ಮುಂತಾದವರು ಕರ್ತವ್ಯದಲ್ಲಿ ಸೇವೆ ಕಂಡುಕೊ0ಡು ಹೆಸರುವಾಸಿಯಾದರು. ಸೈನಿಕರ ಪತ್ನಿಯರು ಉತ್ತಮ ಸೇವೆ ಸಲ್ಲಿಸಿ ಎಂದು ಯುದ್ದ ಭೂಮಿಗೆ ಕಳಿಸುತ್ತಾರೆ. ನಮ್ಮ ವಿದ್ವಾಂಸರಾದ ಕೇರಳದ ಮಾಧವ-ನೀಲಕಂಠ ರವರು ಗಣಿತದ ನಿಪುಣರು. ಕ್ಯಾಲ್ಕ್ಯುಲಸ್ ಲೆಕ್ಕದ ಬಗೆಯನ್ನು ಹದಿನಾಲ್ಕನೇ ಶತಮಾನದಲ್ಲೆ ಕಂಡು ಹಿಡಿದಿದ್ದರು ಎಂದರು.

300x250 AD

ಅಧ್ಯಕ್ಷರಾದ ರೊ.ರೇಣುಕಾರಾದ್ಯರವರು ಎಲೆಮರೆ ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿರುವ ಡಾ.ಬಾಲಕೃಷ್ಣಹೆಗಡೆಯವರು ಆಡು ಮುಟ್ಟದ ಗಿಡವಿಲ್ಲ ಎಂಬ0ತೆ ಅವರು ಕಾರ್ಯ ನಿರ್ವಹಿಸದ ವಿಷಯಗಳೇ ಇಲ್ಲ. ಇತಿಹಾಸ, ಸಂಶೋಧನೆ, ಸಂಸ್ಕೃತಿ, ನಾಟಕ, ಸಿನಿಮಾ ಕ್ರೀಡೆ, ಪತ್ರಿಕೋದ್ಯಮ ಹೀಗೆ ಹತ್ತು ಹಲವಾರು ಕಾರ್ಯಕ್ಷೇತ್ರಗಳಲ್ಲಿ ಯಶಸ್ವಿಯಾಗಿರುವುದರಿಂದ ಇವರನ್ನು ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತಿವೆ.ಇಂತವರನ್ನು ಗುರುತಿಸಿ, ಸನ್ಮಾನಿಸಿ ಗೌರವಿಸುವುದೇ ನಮ್ಮ ರೋಟರಿಯ ದೇಯ ಉದ್ದೇಶ ಎಂದರು.

ರೂಪ ಪುಣ್ಯಕೋಟಿ ಪ್ರಾರ್ಥಿಸಿದರು. ವಾಗೇಶ್ ಪ್ರಾಸ್ಥಾವಿಕವಾಗಿ ಮಾತನಾಡಿದರ. ಗುರುಪಾದಪ್ಪನವರು ಸ್ವಾಗತಿಸಿದರು. ನಾಗರಾಜ ನಿರೂಪಿಸಿದರು. ಲಕ್ಷ್ಮೀನಾರಾಯಣ ವಂದಿಸಿದರು.

Share This
300x250 AD
300x250 AD
300x250 AD
Back to top