ನವದೆಹಲಿ: ಭಾರತೀಯ ಮೂಲದ ಹಿಂದೂಗಳಿಗೆ ಕೆನಡಾ ತೊರೆಯುವಂತೆ ಬೆದರಿಕೆ ಹಾಕುತ್ತಿರುವ ಖಲಿಸ್ತಾನ್ ಪರ ಸಂಘಟನೆಯ ವೀಡಿಯೊವನ್ನು ಖಂಡಿಸಿರುವ ಕೆನಡಾದ ಸಾರ್ವಜನಿಕ ಸುರಕ್ಷತಾ ಸಚಿವ ಡೊಮಿನಿಕ್ ಲೆಬ್ಲಾಂಕ್, ಎಲ್ಲಾ ಕೆನಡಿಯನ್ನರು ತಮ್ಮ ಸಮುದಾಯಗಳಲ್ಲಿ ಸುರಕ್ಷಿತವಾಗಿರಲು ಅರ್ಹರು ಎಂದು ಹೇಳಿದ್ದಾರೆ.
ರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಅಲ್ಲಿರುವ ಹಿಂದೂಗಳಿಗೆ ಬೆದರಿಕೆ ಹಾಕುವ ಕಾರ್ಯವನ್ನು ಖಲಿಸ್ಥಾನಿ ಬೆಂಬಲಿಗರು ಮಾಡುತ್ತಿದ್ದಾರೆ. ಸಿಖ್ಸ್ ಫಾರ್ ಜಸ್ಟಿಸ್ (SFJ) ಎಂಬ ಖಲಿಸ್ತಾನ್ ಪರ ಸಂಘಟನೆಯು ಈ ವಾರದ ಆರಂಭದಲ್ಲಿ ಬೆದರಿಕೆಯ ವೀಡಿಯೊವನ್ನು ಬಿಡುಗಡೆ ಮಾಡಿದೆ.
ಇದನ್ನು ಖಂಡಿಸಿರುವ ಕೆನಡಾ ಸಚಿವರು, “ಎಲ್ಲಾ ಕೆನಡಿಯನ್ನರು ತಮ್ಮ ಸಮುದಾಯಗಳಲ್ಲಿ ಸುರಕ್ಷಿತವಾಗಿರಲು ಅರ್ಹರಾಗಿದ್ದಾರೆ. ಹಿಂದೂ ಕೆನಡಿಯನ್ನರನ್ನು ಗುರಿಯಾಗಿಸಿಕೊಂಡು ಆನ್‌ಲೈನ್ ದ್ವೇಷದ ವೀಡಿಯೊದ ಪ್ರಸಾರವು ಕೆನಡಿಯನ್ನರಾಗಿ ನಾವು ಪ್ರೀತಿಸುವ ಮೌಲ್ಯಗಳಿಗೆ ವಿರುದ್ಧವಾಗಿದೆ. ಆಕ್ರಮಣಶೀಲತೆ, ದ್ವೇಷ, ಬೆದರಿಕೆ ಅಥವಾ ಭಯವನ್ನು ಪ್ರಚೋದಿಸುವ ಕೃತ್ಯಗಳಿಗೆ ಇಲ್ಲಿ ಸ್ಥಳವಿಲ್ಲ” ಎಂದು ಟ್ವಿಟ್ ಮಾಡಿದ್ದಾರೆ.
ಅವರ ಸಾರ್ವಜನಿಕ ಸುರಕ್ಷತಾ ಸಚಿವಾಲಯ ಕೂಡ ವೀಡಿಯೊವನ್ನು ಖಂಡಿಸಿದೆ, ಇದು “ಆಕ್ಷೇಪಾರ್ಹ ಮತ್ತು ದ್ವೇಷಪೂರಿತ” ಎಂದು ಉಲ್ಲೇಖಿಸಿದೆ.