Slide
Slide
Slide
previous arrow
next arrow

ಸೊಸೈಟಿಯ ಕೋಟಿ ಹಣದ ಲೆಕ್ಕ ನೀಡಿ, ಸಭೆ ನಡೆಸಿ: ರೈತರ ಆಕ್ರೋಶ

300x250 AD

ಮುಂಡಗೋಡ: ಎಲ್‌ಎಂಪಿಸಿ ಸೊಸೈಟಿಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯನ್ನ ರೈತರು ಬಹಿಷ್ಕರಿಸಿದ್ದಾರೆ. ಸೊಸೈಟಿಯ ಹಣ 1.23 ಕೋಟಿ ಹಣದ ಲೆಕ್ಕ ಕೊಡಿ, ಬಳಿಕ ಸಭೆ ಮಾಡಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಐದು ವರ್ಷದ ಹಿಂದೆ ಎಲ್‌ಎಂಪಿಸಿ ಸೊಸೈಟಿಯ ಅಧ್ಯಕ್ಷರು ಮತ್ತು ಸದಸ್ಯರು ಸೇರಿ ಬ್ಯಾಂಕ್ ಒಂದರಲ್ಲಿ 1.23 ಕೋಟಿ ಎಫ್‌ಡಿ ಇಟ್ಟಿದ್ದರು. ಆದರೆ ಇನ್ನುವರೆಗೂ ಬಂದಿಲ್ಲ. ಯಾವಾಗ ಆ ಹಣ ಬರುತ್ತದೆ ಎಂದು ರೈತರು ಸಭೆಯಲ್ಲಿ ಪ್ರಶ್ನಿಸಿದ್ದಾರೆ.

300x250 AD

ಎಲ್‌ಎಂಪಿಸಿ ಸೊಸೈಟಿಯಲ್ಲಿ ಇಟ್ಟಿರುವ ಹಣ ರೈತರದ್ದು. ಆ ಹಣ ರೈತರಿಗೆ ತಲುಪಬೇಕು. ಬ್ಯಾಂಕಿನಲ್ಲಿ ಇಟ್ಟಿರುವ ಹಣ ತರಬೇಕು. ಇಲ್ಲದಿದ್ದರೆ ಆ ಹಣ ತರುವ ತನಕ ರೈತರಿಗೆ ಕೊಟ್ಟ ಸಾಲವನ್ನು ಅಲ್ಲಿಯವರೆಗೆ ಮರು ಪಡೆಯಬೇಡಿ. ರೈತರು ಕೂಡ ತುಂಬಬೇಡಿ. ಮುಂದಿನ ದಿನಗಳಲ್ಲಿ ಎಲ್‌ಎಂಪಿಸಿ ಸೊಸೈಟಿ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ರಾಜ್ಯಧ್ಯಕ್ಷ ಚಿದಾನಂದ ಹರಿಜನ ಹೇಳಿದ್ದಾರೆ.

Share This
300x250 AD
300x250 AD
300x250 AD
Back to top