ಕುಮಟಾ: ಪಟ್ಟಣದ ಪಿಕ್‌ಅಪ್ ಬಸ್ ಸ್ಟ್ಯಾಂಡ್ನಲ್ಲಿ ಪೂಜಿಸಲಾದ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಗುರುವಾರ ಅನ್ನ ಸಂತರ್ಪಣೆ ನೆರವೇರಿದ್ದು, ಸಾವಿರಾರು ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು.
ಪಟ್ಟಣದ ಪಿಕ್‌ಅಪ್ ಬಸ್ ಸ್ಟ್ಯಾಂಡ್ನಲ್ಲಿ 46ನೇ ವರ್ಷದ ಗಣೇಶೋತ್ಸವ ಅತೀ ವಿಜೃಂಭಣೆಯಿ0ದ ನಡೆದಿದ್ದು, ಗುರುವಾರ ಅನ್ನ ಸಂತರ್ಪಣೆ ಕಾರ್ಯಕ್ರಮ ಸಂಪನ್ನಗೊOಡಿತು. ಬಿಜೆಪಿ ಮುಖಂಡ ರಜತ್ ಸಣ್ಣಮನೆ ನೇತೃತ್ವದಲ್ಲಿ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಬಹಳ ಅಚ್ಚುಕಟ್ಟಾಗಿ ಅನ್ನ ಸಂತರ್ಪಣೆ ಕಾರ್ಯವನ್ನು ಶ್ರದ್ಧೆಯಿಂದ ನಡೆಸಿಕೊಟ್ಟರು. ಸಾವಿರಾರು ಭಕ್ತರು ಪ್ರಸಾದ ಭೋಜನ ಸ್ವೀಕರಿಸುವ ಮೂಲಕ ಗಣಪನ ಕೃಪಾಶೀರ್ವಾದಕ್ಕೆ ಪಾತ್ರರಾದರು.
ಶನಿವಾರ ಸೆ.23ರಂದು ಸತ್ಯ ಗಣಪತಿ ವೃತ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. ಹಾಗೂ ಸೋಮವಾರ ಸೆ.25ರಂದು ವಿಸರ್ಜನಾ ಕಾರ್ಯಕ್ರಮ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪಿಕ್ ಅಪ್ ಬಸ್ ಸ್ಟ್ಯಾಂಡ್ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀಧರ ನಾಯ್ಕ ವಿನಂತಿಸಿದರು.
ಈ ಸಂದರ್ಭದಲ್ಲಿ ಪಿಕ್‌ಅಪ್ ಬಸ್ ಸ್ಟ್ಯಾಂಡ್ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷ ಸುಧಾಕರ ನಾಯ್ಕ, ಕಾರ್ಯದರ್ಶಿ ರಾಜೇಶ ನಾಯ್ಕ, ಖಜಾಂಚಿ ಬಾಲಚಂದ್ರ ನಾಯ್ಕ, ಸಂಘಟನಾ ಕಾರ್ಯದರ್ಶಿ ಉಮೇಶ ನಾಯ್ಕ, ಆಟೋ, ಲಗೇಜ್ ಆಟೋ, ಟೆಂಪೋ ಚಾಲಕರು, ಮಾಲಕರು, ಸಮಿತಿ ಸದಸ್ಯರು ಉಪಸ್ಥಿತರಿದ್ದರು.