ಶಿರಸಿ: ಸಂಕಥನ ಎನ್ನುವುದು ಒಂದು ಪಾರೀಭಾಷಿಕ ಶಬ್ದವಾಗಿದ್ದು, ಭಾರತೀಯ ವಾಗ್ಮಯ ಪ್ರಪಂಚದಲ್ಲಿ ಸಂಕಥನ ಎನ್ನುವ ಶಬ್ದವಿಲ್ಲ. ಇದು ಪಾಶ್ಚಾತ್ಯ ಸಾಹಿತ್ಯ ವಲಯದಲ್ಲಿ ಪ್ರತೀತವಾದ ಹೆಸರಾಗಿದ್ದು, ಇದನ್ನು ವಿಮರ್ಶಕರು, ಭಾಷಾ ಶಾಸ್ತ್ರಜ್ಞರು ಹೆಚ್ಚಾಗಿ ಬಳಸುತಿದ್ದರು. ಈಗಲೂ ಬಳಕೆ ಮಾಡುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಅಶೋಕ ಹಾಸ್ಯಗಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನಗರದ ನೆಮ್ಮದಿ ಕುಟೀರದಲ್ಲಿ ಸೋಮವಾರ ನಡೆದ ಆರ್.ಡಿ.ಹೆಗಡೆ ಆಲ್ಮನೆ ಅವರ ‘ಸಂಕಥನ’ ಅಂಕಣ ಬರಹದ ಎರಡನೇ ಆವೃತ್ತಿ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಶಿರಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಅಧ್ಯಕ್ಷತೆ ವಹಿಸಿದ್ದರು. ಹುಳಗೋಳ ನಾಗಪತಿ ಹೆಗಡೆ ಪುಸ್ತಕ ಪರಿಚಯಿಸಿದರು. ಕೃತಿಕಾರ ಆರ್.ಡಿ.ಹೆಗಡೆ ಸಾಂದರ್ಭಿಕ ಮಾತುಗಳನ್ನಾಡಿದರು.
ಕೃಷ್ಣ ಪದಕಿ ಸ್ವಾಗತಿಸಿದರು. ವಿಮಲಾ ಭಾಗ್ವತ ಪ್ರಾರ್ಥಿಸಿದರು. ಭವ್ಯ ಹಳೆಯೂರು ಕಾರ್ಯಕ್ರಮ ನಿರ್ವಹಿಸಿದರು.