Slide
Slide
Slide
previous arrow
next arrow

ಕಸದಿಂದ ತುಂಬಿದ ಪಡಂಬೈಲ್ ರಸ್ತೆ: ಕಠಿಣ ಕ್ರಮಕ್ಕೆ ಆಗ್ರಹ

300x250 AD

ಶಿರಸಿ :ನಗರದ ಬನವಾಸಿ ರಸ್ತೆಗೆ ತಾಗಿಕೊಂಡಿರುವ ಕುಳವೆ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುವ ಪಡಂಬೈಲ್ ಮುಖ್ಯ ರಸ್ತೆಯಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು,‌ ಸ್ಥಳೀಯ ಅಂಗಡಿ, ಹೊಟೇಲ್’ಗಳ ಕಸದಿಂದ ಜನ ಸಂಚಾರ ಕಷ್ಟವಾದ ಸ್ಥಿತಿ ಎದುರಾಗಿದೆ.

ಪಡಂಬೈಲ್ ಮುಖ್ಯ ರಸ್ತೆಯಲ್ಲಿ ಕುಳವೆ, ತೆರಕನಹಳ್ಳಿ ಸೇರಿದಂತೆ ಹಲವು ಹಳ್ಳಿಗಳಿಂದ ಶಿರಸಿಗೆ ಬರುವ ನೂರಾರು ಜನರು ಸಂಚಾರ ಮಾಡುತ್ತಾರೆ. ಇವರೆಲ್ಲರೂ ಪ್ರತಿ ದಿವಸ ಗಬ್ಬು ನಾರುವ ವಾಸನೆಯನ್ನು ಸೇವಿಸಿಕೊಂಡೇ ಶಿರಸಿಗೆ ಬರಬೇಕಾದ ಸ್ಥಿತಿಯಿದ್ದು, ಸ್ಥಳೀಯರೂ ಸೇರಿದಂಗೆ ಓಡಾಡುವ ಜನರು ಅನಾರೋಗ್ಯಕ್ಕೆ ತುತ್ತಾಗುವ ಮೊದಲು ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ.

ಕಳೆದ ಹಲವು ವರ್ಷಗಳಿಂದ ಇಲ್ಲಿ ಕಸದ ಸಮಸ್ಯೆಯಿದೆ. ಮೊದಲು ಪಂಚಾಯತದಿಂದ ಸಿಸಿಟಿವಿ ಆಳವಡಿಸಿ ಇದಕ್ಕೆ ಕಡಿವಾಣ ಹಾಕಲು ಪ್ರಯತ್ನ ನಡೆಸಲಾಗಿತ್ತು. ನಂತರ ಇತ್ತೀಚಿಗೆ ಸ್ಥಳೀಯರು, ಪಂಚಾಯತ ಸದಸ್ಯರು ಎರಡು ಮೂರು ಬಾರಿ ಕಸ ಹಾಕುವವರನ್ನು ಹಿಡಿದು ದಂಡ ಹಾಕುವ ಕೆಲಸ ಮಾಡಿದ್ದರು. ಜೊತೆಗೆ ಶಿರಸಿ ನಗರಸಭೆಯವರ ಸಹಕಾರವನ್ನೂ ಇದಕ್ಕೆ ಕೋರಲಾಗಿತ್ತು. ಆದರೆ ಒಮ್ಮೆ ಮಾತ್ರ ಕಸ ತೆಗೆದುಕೊಂಡು ಹೋಗಿ ಪುನಃ ನಗರಸಭೆಯವರು ಬಾರದ ಕಾರಣ ಕಸದ ಸಮಸ್ಯೆ ಪುನಃ ಉಲ್ಬಣವಾಗಿದೆ.

ಗ್ರಾಮ ಪಂಚಾಯತ ವ್ಯಾಪ್ತಿಯದ್ದಾದರೂ ಇಲ್ಲಿ ಬರುವ ಕಸ ಶೇ.90 ರಷ್ಟು ನಗರ ಭಾಗದ್ದಾಗಿದೆ. ಕಾರಣ ನಗರದ ಬನವಾಸಿ ರಸ್ತೆಯ ಅಂಗಡಿ-ಹೊಟೆಲ್’ಗಳಿಗೆ ಪುಡ್ ಇನ್ಸ್ಪೆಕ್ಟರ್ ಭೇಟಿ ನೀಡಿ, ತಾಲೂಕಿನ ಕುಳವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಡಂಬೈಲ್ ಮುಖ್ಯ ರಸ್ತೆಯಲ್ಲಿ ಕಸ ಬೀಸಾಡಿದರೆ ಅಂಡಿಗಳ ಪರವಾನಿಗೆ ರದ್ದುಪಡಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಬೇಕೆಂದು ಕುಳವೆ ಗ್ರಾ.ಪಂ ಸದಸ್ಯ ಗಂಗಾಧರ ನಾಯ್ಕ ಆಗ್ರಹಿಸಿದ್ದಾರೆ.

ಫುಡ್ ಇನ್ಸ್ಪೆಕ್ಟರ್ ಬನವಾಸಿ ರಸ್ತೆಯ ಅಂಗಡಿ ಮತ್ತು ಹೋಟೆಲ್’ಗಳಿಗೆ ಭೇಟಿ ನೀಡಿ, ರಸ್ತೆ ಪಕ್ಕದಲ್ಲಿ ತ್ಯಾಜ್ಯಗಳನ್ನು ಎಸೆಯುತ್ತಾರೋ ಅಂತಹ ಅಂಗಡಿ ಹಾಗೂ ಹೊಟೆಲ್ ಗಳ ಲೈಸನ್ಸ್ ರದ್ದುಪಡಿಸಿ ಬಿಸಿ ಮುಟ್ಟಿಸಬೇಕಾಗಿದೆ. ನಗರ ಸಭೆಯ ಅಧಿಕಾರಿಗಳು ನಗರವನ್ನು ಸ್ವಚ್ಛವಾಗಿಡಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಕಸ ಎಸೆಯುವವರಿಂದ ನಗರಕ್ಕೂ ಮತ್ತು ಗ್ರಾಮ ಪಂಚಾಯಿತಕ್ಕೂ ಕೆಟ್ಟ ಹೆಸರು, ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು, ನಗರಸಭೆಯ ಕಸ ಸಂಗ್ರಹಣೆ  ವಾಹನಗಳಿಗೆ ನೀಡುವಂತೆ ಗಾಡಿಗೆ ಕಸ ನೀಡುವಂತೆ ಕ್ರಮ ಕೈಗೊಂಡರೆ ನಗರ ಮತ್ತು ಗ್ರಾಮೀಣ ಗಡಿ ಭಾಗವನ್ನು ಸ್ವಚ್ಛತೆಯಾಗಿಟ್ಟುಕೊಳ್ಳಬಹುದು. ಈ ಬಗ್ಗೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

300x250 AD

Share This
300x250 AD
300x250 AD
300x250 AD
Back to top