ಶಿರಸಿ: ತಾಲೂಕಿನ ಸೋಂದಾದ ಉಮ್ಮೆ ಸಲ್ಮಾ ಕೊಂ ಅಬ್ದುಲ್ ಸತ್ತಾರ್ ಶೇಖ್ ಸೊಂದಾ ಇವರು ಸೈಬರ್ ಕ್ರೈಮ್ ಜಾಲಕ್ಕೆ ಸಿಲುಕಿ ಸುಮಾರು ಒಂದು ಲಕ್ಷ ರೂ.ಗಳನ್ನು ಕಳೆದುಕೊಂಡ ಘಟನೆ ನಡೆದಿದೆ.
ಇವರು ಕೆನರಾ ಬ್ಯಾಂಕ್ ಹುಲೆಕಲ್ ಶಾಖೆಯಲ್ಲಿ ತಮ್ಮ ಖಾತೆಗೆ ಲಿಂಕ್ ಇರುವ ತನ್ನ ಮೊಬೈಲ್ ಪೆ ಮತ್ತು ಪೆಟಿಎಮ್ ಮೂಲಕ CPLಮತ್ತು APP ಕಳಿಸಿರುವ ಬೇರೆ ಖಾತೆಗೆ ಸುಮಾರು 1.33ಲಕ್ಷ ರೂ. ಹಾಕಿದ್ದರೂ ಕೇವಲ 39 ಸಾವಿರ ಮಾತ್ರ ಉಮ್ಮೆಯವರ ಖಾತೆಗೆ ಜಮಾ ಮಾಡಿ ಉಳಿದ ಹಣ ಪಂಗನಾಮ ಹಾಕಿದ್ದಾರೆ.ಈ ಬಗ್ಗೆ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.