ಶಿರಸಿ: ತೀವ್ರ ಕುತೂಹಲ ಮೂಡಿಸಿದ್ದ ಟಿಎಸ್ಎಸ್ ಚುನಾವಣೆಗೆ ಸಂಬಂಧಿಸಿ ಸ್ಕ್ರುಟಿನಿ ನಂತರದಲ್ಲಿ ಚುನಾವಣಾಧಿಕಾರಿ ನಿರ್ಧಾರ ಘೋಷಿಸಿದ್ದು, ನಾಮಪತ್ರ ಸಲ್ಲಿಸಿದ್ದ 11 ಸಹಕಾರಿ ಸಂಘಗಳಿಗೆ ಹಾಗು ವ್ಯಕ್ತಿಗತವಾಗಿ ನಾಮಪತ್ರ ಸಲ್ಲಿಸಿದ್ದವರಲ್ಲಿ ಈರ್ವರನ್ನು ಹೊರತುಪಡಿಸಿ, ಉಳಿದವರೆಲ್ಲರಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ ನಿರ್ಧಾರ ಪ್ರಕಟಿಸಲಾಗಿದೆ.
ಅದರಂತೆ ಸಾಮಾನ್ಯ ವರ್ಗದಿಂದ ಒಟ್ಟೂ 50 ಸ್ಪರ್ಧಿಗಳಿಗೆ, ಮಹಿಳಾ ಮೀಸಲು ಕ್ಷೇತ್ರದಿಂದ 5 ಜನ, ಹಿಂದುಳಿದ ವರ್ಗ (ಅ) ದಿಂದ 3 ಜನ, ಹಿಂದುಳಿದ ವರ್ಗ ‘ಬ’ 3 ಜನರಿಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಸೋಮವಾರ ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶವಿದೆ.