ಶಿರಸಿ: ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮನ್ಬೈಲ್ ಸಹಯೋಗದಲ್ಲಿ ಆ.11ರಂದು ನಡೆಸಲಾದ 14 ವರ್ಷ ವಯೋಮಿತಿಯೊಳಗಿನ ವಿದ್ಯಾರ್ಥಿಗಳ ಕ್ಲಸ್ಟರ್ ವಿಭಾಗದ ಚೆಸ್ ಮತ್ತು ಯೋಗಾಸನ ಸ್ಪರ್ಧೆಯಲ್ಲಿ ನಗರದ ಲಯನ್ಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಸಾಧನೆ ಗೈದಿದ್ದಾರೆ.
ಬಾಲಕಿಯರ ಚೆಸ್ ವಿಭಾಗದಲ್ಲಿ 6 ನೇ ತರಗತಿಯ ಅನ್ವಿತಾ ಎನ್. ಹೆಗಡೆ ಪ್ರಥಮ, 7 ನೇ ತರಗತಿಯ ಪಂಚಮಿ ಜಯಂತ್ ದ್ವಿತೀಯ, ಬಾಲಕರ ಚೆಸ್ ವಿಭಾಗದಲ್ಲಿ 6 ನೇ ತರಗತಿಯ ಅಭಯ ಆರ್. ಹೆಗಡೆ ದ್ವಿತೀಯ, ಬಾಲಕಿಯರ ಯೋಗಾಸನ ಸ್ಪರ್ಧೆಯಲ್ಲಿ 7 ನೇ ತರಗತಿಯ ಅರ್ಪಿತಾ ಹೆಗಡೆ ಪ್ರಥಮ, 6 ನೇ ತರಗತಿಯ ಪಲ್ಲವಿ ಎನ್. ಜೋಶಿ ದ್ವಿತೀಯ ಸ್ಥಾನ ಪಡೆಯವುದರೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಂತೆಯೇ 6 ನೇ ತರಗತಿಯ ಸಿಂಚನಾ ಪಿ. ಹೆಗಡೆ ಬಾಲಕಿಯರ ಯೋಗಾಸನ ಸ್ಪರ್ಧೆಯಲ್ಲಿ 5 ನೇ ಸ್ಥಾನ ಪಡೆದು ವಿದ್ಯಾರ್ಥಿಗಳು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಕರುಗಳಾದ ಶ್ರೀಮತಿ ಚೇತನಾ ಪಾವಸ್ಕರ್ ಮತ್ತು ನಾಗರಾಜ ಜೋಗಳೇಕರ್ ಮಾರ್ಗದರ್ಶನ ನೀಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಶಾಲೆಯ ಪ್ರಾಂಶುಪಾಲ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ವೃಂದ, ಲಯನ್ಸ್ ಬಳಗ ಮತ್ತು ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ.