ಶಿರಸಿ:ಇಲ್ಲಿನ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಇಖ್ರಾ ಸಂಯುಕ್ತ ಪದವಿ ಪೂರ್ವ ಕಾಲೇಜು, ಇವರ ಸಂಯುಕ್ತ ಆಶ್ರಯದಲ್ಲಿ ಪದವಿ ಪೂರ್ವ ಇಲಾಖೆಯು ನಡೆಸುವ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಎಂಇಎಸ್ ಕಾಲೇಜಿನ ವಿದ್ಯಾರ್ಥಿಗಳು ಹಲವು ಕ್ರೀಡೆಯಲ್ಲಿ ಭಾಗವಹಿಸಿ, ವಿಜೇತರಾಗಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
110 ಮೀ ಓಟ, ಹರ್ಡಲ್ಸ, 4×100ಮೀ ರೀಲೆ, ಪೋಲ್ ವಾಲ್ಟ್ ಶ್ರವಣ ಪಿ ಹೆಗಡೆ ಪ್ರಥಮ, ಶ್ರೇಯಸ್ ಕೆ. ಎನ್ 100 ಮೀ ಓಟದಲ್ಲಿ ದ್ವಿತೀಯ,
200 ಮೀ ಓಟದಲ್ಲಿ ತೃತೀಯ, 4×100 ಮೀ ರೀಲೆ/ಉದ್ದ ಜಿಗಿತದಲ್ಲಿ ಪ್ರಥಮ, ವರುಣ ಎ. ಎಮ್. ಹ್ಯಾಮರ್ ಎಸೆತದಲ್ಲಿ ದ್ವಿತೀಯ,
ನಾಗರಾಜ ಪಿ. ಪ್ರಭು 4×100 ಮೀ ರೀಲೆಯಲ್ಲಿ ಪ್ರಥಮ, ಧೀರಜ ಪಿ. ಜಿ. 4×100 ಮೀ ರೀಲೆಯಲ್ಲಿ ಪ್ರಥಮ, ಸ್ನೇಹಾ ಪಿ. ಭಟ್ 100/200 ಮೀ/
100 ಮೀ ಓಟ, ಹರ್ಡಲ್ಸನಲ್ಲಿ ಪ್ರಥಮ, ರೇಷ್ಮಾ ದೇವಾಡಿಗ ಗುಂಡು ಎಸೆತದಲ್ಲಿ ತೃತೀಯ, ಸೌಜನ್ಯ ಹೆಗಡೆ ಚಕ್ರ ಎಸೆತದಲ್ಲಿ ಪ್ರಥಮ, ಸ್ವಾತಿ ಹೆಗಡೆ ಎತ್ತರ ಜಿಗಿತದಲ್ಲಿ ತೃತೀಯ, ಮಾಝಿಯಾ ಶೇಖ್ ಜಾವಲೀನ್ ಎಸೆತದಲ್ಲಿ ದ್ವಿತೀಯ, ಯೋಗ ಸ್ಪರ್ಧೆಯಲ್ಲಿ ಸಿಂಚನಾ ಕೆ. ಪಂಡಿತ ಸ್ನೇಹಶ್ರೀ ಹೆಗಡೆ, ಸುಕ್ಷೀತ ಆಗೇರ್ ಪ್ರಥಮ, ಶ್ರೇಯಾ ಎಮ್. ವಿ. ಚೆಸ್’ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಅಂತೆಯೇ ಬಾಲಕರ ಥ್ರೋಬಾಲ್ ತಂಡ ಪ್ರಥಮ ಸ್ಥಾನ ಹಾಗೂ ಬಾಲಕರ ಟೇಬಲ್ ಟೆನ್ನಿಸ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಅಧ್ಯಕ್ಷರು, ಆಡಳಿತ ಮಂಡಳಿಯ ಪದಾಧಿಕಾರಿಗಳು, ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿ ವರ್ಗ ಮತ್ತು ದೈಹಿಕ ಶಿಕ್ಷಕರು ಅಭಿನಂದಿಸಿ, ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿಯೂ ಹೆಚ್ಚಿನ ಸಾಧನೆ ಮಾಡಲೆಂದು ಶುಭ ಹಾರೈಸಿದ್ದಾರೆ.