ಕಾರವಾರ: ಗೃಹಜ್ಯೋತಿ ಆಮಂತ್ರಣ ಪತ್ರಿಕೆಯಲ್ಲಿ ಬಿಜೆಪಿ ಪರಿಷತ್ ಸದಸ್ಯರು, ಶಾಸಕರ ಹೆಸರುಗಳನ್ನ ಮೇಲ್ಭಾಗದಲ್ಲಿ ಮುದ್ರಿಸಿ, ಆಡಳಿತ ಪಕ್ಷದ ಶಾಸಕರಾಗಿರುವ ತಮ್ಮ ಹೆಸರನ್ನ ಕೊನೆಯಲ್ಲಿಟ್ಟು ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಶಿರಸಿ ಶಾಸಕ ಭೀಮಣ್ಣ ನಾಯ್ಕ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.
ಹೆಸ್ಕಾಂನ ಗೃಹಜ್ಯೋತಿ ಆಮಂತ್ರಣ ಪತ್ರಿಕೆಯ ಮುಖ್ಯ ಅಥಿತಿಗಳ ಪಟ್ಟಿಯಲ್ಲಿ ಬಿಜೆಪಿ ಶಾಸಕರಾದ ಶಿವರಾಮ ಹೆಬ್ಬಾರ, ದಿನಕರ ಶೆಟ್ಟಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ವಿ.ಸಂಕನೂರ, ಶಾಂತಾರಾಮ ಸಿದ್ದಿ ಹಾಗೂ ಗಣಪತಿ ಉಳ್ವೇಕರ ಹೆಸರ ನಂತರದಲ್ಲಿ ಭೀಮಣ್ಣ ಅವರ ಹೆಸರನ್ನು ಮುದ್ರಿಸಲಾಗಿತ್ತು.
ಇದನ್ನ ಕಂಡು ಅಸಮಾಧಾನಗೊಂಡ ಭೀಮಣ್ಣ, ಕೆಡಿಪಿ ಸಭೆಯ ಭೋಜನ ವಿರಾಮದ ವೇಳೆ ಹೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸೂಪರಿಂಟೆoಡೆoಟ್ ಎಂಜಿನಿಯರ್ ದೀಪಕ್ ಕಾಮತ್ ಅವರಿಗೆ ತಕ್ಷಣ ಆಮಂತ್ರಣ ಪತ್ರಿಕೆ ಬದಲಿಸಿ ನೀಡುವಂತೆ ಸೂಚಿಸಿದರು.