ಶಿರಸಿ: ಧರ್ಮಸ್ಥಳದ ಸೌಜನ್ಯ ಪ್ರಕರಣವನ್ನು ಮರು ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಸರಕಾರಕ್ಕೆ ಆಗ್ರಹಿಸಿ ಸಮಾಜಿಕ ಕಾರ್ಯಕರ್ತ ಹಿತೆಂದ್ರ ನಾಯ್ಕ ಹಳೆಬಸ್ ನಿಲ್ದಾಣದ ಬಳಿ ಮಣ್ಣು ಹಿಡಿದು ವಿನೂತನವಾಗಿ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಸೌಜನ್ಯ ಪ್ರಕರಣದಲ್ಲಿ ಹಾಗು ಮಣಿಪುರದಲ್ಕಿ ನಡೆಯುತ್ತಿರುವ ಅತ್ಯಚಾರ ಕೊಲೆ ಪ್ರಕರಣದಲ್ಲಿ ನಮ್ಮ ಅದಿಕಾರಿಗಳು ಮತ್ತು ರಾಜಕಾರಣಿಗಳು ಜವಾಬ್ದಾರಿ ಮರೆತರೆ ನಾಗರಿಕರು ಮಾನವಿಯತೆ ಮರೆತಿದ್ದಾರೆ. ಇಂತಹ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ನಾಗರಿಕರು ಮಣ್ಣು ತಿನ್ನಬೇಕೆಂದು ಮಣ್ಣಿನ ಪ್ರದರ್ಶನ ಮಾಡಿದರು. ನಮ್ಮ ರಾಜ್ಯ ಮತ್ತು ದೇಶದಲ್ಲಿ ಮಹಿಳೆಯರಿಗೆ ಸ್ವಾತಂತ್ರ‍್ಯವೇ ಇಲ್ಲದಂತಾಗಿದೆ. ಮಹಿಳೆಯರ ಮೇಲೆ ಹಾಡಹಗಲೇ ಅತ್ಯಾಚಾರ ಕೊಲೆ ಕಿರುಕುಳ ನಡೆಯುತ್ತಿದೆ. ಇಂತಹ ಕ್ರೂರಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವದನ್ನು ಬಿಟ್ಟು ನಮ್ಮ ರಾಜಕಾರಣಿಗಳು ಹಾಗು ಅದಿಕಾರಿಗಳು ತಪ್ಪು ಮಾಡಿದವರಿಗೆ ಹಿಂಬಾಗಿಲಿನಿಂದ ಸಹಾಯ ಮಾಡುತ್ತಿದ್ದಾರೆ. ಇಂತಹ ಅಧಿಕಾರಿ,ರಾಜಕಾರಣಿಗಳಿಂದ ದೇಶ ಉದ್ದಾರವಾಗುವದಿಲ್ಲ, ಮಹಾತ್ಮರು ಕಂಡ ಕನಸಿನಂತೆ ರಾಮ ರಾಜ್ಯವಾಗುವದಿಲ್ಲವೆಂದರು.
ನಾಗರಿಕರು ಕೂಡಾ ಸೌಜನ್ಯ ಹಾಗೂ ಮಣಿಪುರದಲ್ಲಿ ನಡೆದ ಪ್ರಕರಣವನ್ನು ಪಕ್ಷಾತೀತವಾಗಿ ಖಂಡಿಸಬೇಕು. ನಿಮಗೆ ಅನ್ನಿಸಿದ ರೀತಿಯಲ್ಲಿ ಖಂಡಿಸಬೇಕು. ಇಂದು ಅಲ್ಲಿ ನಡೆದರೆ ನಾಳೆ ನಮ್ಮ ಮನೆ ಬಾಗಿಲಲ್ಲೇ ನಡೆಯುತ್ತದೆ. ಆದ್ದರಿಂದ ಮಹಿಳೆಯರಿಗೆ ನ್ಯಾಯಕ್ಕಾಗಿ ಪ್ರತಿಭಟನೆ ಮಾಡಲೇಬೇಕು. ಸರಕಾರ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಹೇಳಿದರು. ಪ್ರತಿಭಟನೆಯಲ್ಲಿ ಮಂಜುಳಾ, ಪೂಜಿತಾ, ಜಯಸೂರ್ಯ, ಪಾಂಡುರ0ಗ, ನಝೀರ್, ಹರೀಶ, ಬಾಲಕೃಷ್ಣ ಇನ್ನಿತರರಿದ್ದರು.