Slide
Slide
Slide
previous arrow
next arrow

ತಾಳೆ ಬೆಳೆ ಬೆಳೆಯಲು ರೈತರಿಂದ ಅರ್ಜಿ ಆಹ್ವಾನ

300x250 AD

ಸಿದ್ದಾಪುರ: 2023-24 ನೇ ಸಾಲಿನ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಯೋಜನೆಯಡಿ ತಾಳೆ ಬೆಳೆ ಬೆಳೆಯಲು ಇಚ್ಛಿಸುವ ತಾಲ್ಲೂಕಿನ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ನೀರಾವರಿ ವ್ಯವಸ್ಥೆ ಹೊಂದಿರುವ ಹಾಗೂ ಕನಿಷ್ಠ ಒಂದು ಎಕರೆ ಪ್ರದೇಶದಲ್ಲಿ ತಾಳೆ ಬೆಳೆ ಅಭಿವೃದ್ಧಿ ಗೊಳಿಸಿದ ರೈತರಿಗೆ ಗರಿಷ್ಠ ರೂ. 11600 ಸಹಾಯಧನ ನೀಡಬಹುದಾಗಿದೆ.ಇದರೊಂದಿಗೆ 4 ವರ್ಷ ತಾಳೆಯಲ್ಲಿ ಅಂತರ ಬೆಳೆ ಕೃಷಿ ಹಾಗೂ ರಸಗೊಬ್ಬರ ಖರೀದಿಗೆ ಪ್ರತ್ಯೇಕವಾಗಿ ಸಹಾಯಧನ ಪ್ರತಿ ವರ್ಷ ಪಡೆಯಬಹುದಾಗಿದೆ.ತಾಳೆ ಬೆಳೆಯಲ್ಲಿ ಹನಿ ನೀರಾವರಿ ಅಳವಡಿಕೆ ಹಾಗೂ ಯಾಂತ್ರೀಕರಣ ಕುರಿತು ಸಹಾಯಧನವನ್ನು ಮಾರ್ಗಸೂಚಿ ಅನುಸಾರ ಪಡೆಯಬಹುದಾಗಿದೆ.
ಹೆಚ್ಚಿನ ವಿವರಗಳಿಗಾಗಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಮೊಬೈಲ್ ಸಂಖ್ಯೆ Tel:+6360012441, Tel:+917353346902, Tel:+9535906269, tel:+919535490912ಮತ್ತು tel:+918310020952ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top