ಶಿರಸಿ: ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮೀಜಿಗಳ 33ನೇ ಪಿಠಾರೋಹಣ ಸಮಾರಂಭದ ಸವಿನೆನಪಿಗಾಗಿ ರಾಗಮಿತ್ರ ಪ್ರತಿಷ್ಠಾನದಿಂದ ಗುರು ಗೌರವಾರ್ಪಣೆ ಕಲಾ ಅನುಬಂಧ ಸಂಗೀತ ಕಾರ್ಯಕ್ರಮಗಳನ್ನು ನಗರದ ಯೋಗ ಮಂದಿರದಲ್ಲಿ ಪ್ರತಿ ತಿಂಗಳ ಸೋಮವಾರ ಸಂಜೆ 6 ರಿಂದ ಎರಡು ಗಂಟೆಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರತಿಷ್ಠಾನದ ಮುಖ್ಯಸ್ಥ ಪ್ರಕಾಶ್ ಹೆಗಡೆ ಯಡಹಳ್ಳಿ ತಿಳಿಸಿದ್ದಾರೆ.
ಆಗಸ್ಟ್ 1 ರ ಸಂಜೆ 6ಕ್ಕೆ ಈ ಸರಣಿ ಕಾರ್ಯಕ್ರಮಕ್ಕೆ ಲಯನ್ಸ್ ಅಧ್ಯಕ್ಷ ಅಶೋಕ್ ಹೆಗಡೆ ಉದ್ಘಾಟಿಸಲಿದ್ದು, ಅತಿಥಿಗಳಾಗಿ ವೇದಮೂರ್ತಿ ಶ್ರೀಕೃಷ್ಣ ಭಟ್ ನೆಲಮಾವು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ, ಸಂಗೀತಗಾರ ಸಂಜೀವ ಪೋತದಾರ, ಪ್ರತಿಷ್ಠಾನದ ಅಧ್ಯಕ್ಷ ಎಂ.ಎನ್. ಹೆಗಡೆ ಮಾಳೆನಳ್ಳಿ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಸಂಗೀತಾಭಿಮಾನಿ ರಘುಪತಿ ಭಟ್ ಸುಗಾವಿ ವಹಿಸಿಕೊಳ್ಳುವರು. ಹಿರಿಯ ಸಂಗೀತ ಕಲಾವಿದರಾದ ಪಂಡಿತ್ ಆರ್. ವಿ. ಹೆಗಡೆ ಅವರಿಗೆ ಗೌರವ ಸಮ್ಮಾನ ಹಮ್ಮಿಕೊಳ್ಳಲಾಗಿದೆ. ಬಳಿಕ ವಿಭಾ ಹೆಗಡೆ ಯಲ್ಲಾಪುರ ಅವರಿಂದ ಗಾಯನ ಹಾಗೂ ಪಂಡಿತ್ ಹಳ್ಳದಕೈ ಅವರಿಂದ ಸಿತಾರ್ ವಾದನ ನಡೆಯಲಿದೆ.
ಸೆ. 4ರಂದು ಕುಮಾರ ರೂಪಕ್ ವೈದ್ಯ ತಬಲಾ ಸೋಲೋ, ವಿದ್ವಾನ್ ದತ್ತಾತ್ರೇಯ ವೇಲನಕರ್ ಅವರಿಂದ ಗಾಯನ, ಅಕ್ಟೋಬರ್ 2ರಂದು ವಿದ್ವಾನ್ ಭಾರ್ಗವರಾವ್ ಅವರಿಂದ ಕೊಳಲು, ಮೇಧಾ ಭಟ್ ಅವರಿಂದ ಗಾಯನ ನಡೆಯಲಿದೆ.
ನವೆಂಬರ್ 6 ರಂದು ಕುಮಾರಿ ಶ್ರೀರಂಜಿನಿ ಅವರಿಂದ ಗಾಯನ, ವಿದೂಷಿ ವಸುಧಾ ಶರ್ಮ ಅವರಿಂದ ಗಾಯನ, ಡಿಸೆಂಬರ್ 4ರ ಸೋಮವಾರ ಕುಮಾರ್ ಅಜೇಯ ಹೆಗಡೆ ಹಾರ್ಮೋನಿಯಂ ಸೋಲೋ, ವಿದುಷಿ ರೇಖಾ ಭಟ್ ಕೋಟೆಮನೆ ಅವರಿಂದ ಗಾಯನ ನಡೆಯಲಿದೆ.
2024ರ ಜನವರಿ 1 ಸೋಮವಾರದಂದು ವೇಣುಗೋಪಾಲ್, ವಿದ್ವಾನ್ ಅಭಿಜಿತ್ ಶಣೈ ಗಾಯನ, ಫೆಬ್ರವರಿ 5 ಕ್ಕೆ ಭರತ್ ಹೆಗಡೆಯವರಿಂದ ಹಾರ್ಮೋನಿಯಂ ಸೋಲೋ, ಹಾಗೂ ರೇಖಾ ದಿನೇಶ್ ಅವರಿಂದ ಗಾಯನ, ಮಾರ್ಚ 4 ರಂದು ಕುಮಾರಿ ಪ್ರಾರ್ಥನಾ ಹೆಗಡೆ, ವಿದ್ವಾನ್ ಶ್ರೀಧರ ಹೆಗಡೆ ಗಾಯನ ಮಾಡಲಿದ್ದಾರೆ.
ಏ.1ರಂದು ಅಂಜನಾ ಹೆಗಡೆ ಹಾರ್ಮೋನಿಯಂ ಸೋಲೋ, ಸ್ಮಿತಾ ಹೆಗಡೆಯವರಿಂದ ಗಾಯನ, ಮೇ 6ರಂದು ಶಾರದಾ ರಾವ್, ಸುಪ್ರಿಯಾ ಹಿತ್ಲಳ್ಳಿ ಗಾಯನ, ಜೂನ್ 3ಕ್ಕೆ ಸಮರ್ಥ ಹೆಗಡೆ ಕೊಳಲು, ವಿಘ್ನೇಶ್ವರ ಭಟ್ಟ ಗಾಯನ, ಜುಲೈ 1ರಂದು ಸ್ನೇಹಾ ಅಮ್ಮಿನಳ್ಳಿ ಗಾಯನ, ನಾಗರಾಜ ಹೆಗಡೆ ಶಿರನಾಳ ಕೊಳಲು ವಾದನ ನಡೆಯಲಿದೆ. ಹಿರಿ ಕಿರಿಯ ಕಲಾವಿದರು ಸಹಕಾರ ನೀಡಲಿದ್ದಾರೆ ಎಂದು ಪ್ರಕಟಣಿಯಲ್ಲಿ ತಿಳಿಸಿದ್ದಾರೆ.