ಜೊಯಿಡಾ: ತಾಲೂಕಿನಲ್ಲಿ ಅತಿಯಾಗಿ ಬೀಳುತ್ತಿರುವ ಮಳೆಗೆ ವಿವಿಧ ಇಲಾಖೆಗಳ ಹಳೆಯ ಕಟ್ಟಡಗಳು ಬೀಳುವ ಹಂತಕ್ಕೆ ಬಂದಿವೆ. ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿರುವ ಭೂ ಮಾಪಾನಾ ಇಲಾಖೆಯ ಕಚೇರಿ ಹಿಂದಿನ ಗೋಡೆ ಬೀಳುವ ಹಂತ ತಲುಪಿದ್ದು, ಪ್ರತಿ ದಿನ ಗೋಡೆಯಿಂದ ಬರುವ ನೀರನ್ನು ಬಕೆಟ್ ತುಂಬಿ ಹೊರ ಹಾಕಲಾಗುತ್ತಿದೆ.
ಕಳೆದ 40 ವರ್ಷಗಳ ಹಿಂದೆ ಕಟ್ಟಿದ ಈ ಕಟ್ಟಡ ಎಲ್ಲಾ ಕಡೆಯೂ ಸೋರುತ್ತಿದ್ದು ಅಲ್ಲಿನ ಅಧಿಕಾರಿ ಸಿಬ್ಬಂದಿಗಳು ಜೀವ ಭಯದಲ್ಲೇ ಕೆಲಸ ಮಾಡಬೇಕಾಗಿದೆ. ಸಂಬ0ಧ ಪಟ್ಟವರು ಇಲ್ಲಿರುವ ಭೂಮಾಪನ ಇಲಾಖೆ ಕಚೇರಿಯನ್ನು ಕೂಡಲೇ ಮಿನಿ ವಿಧಾನ ಸೌಧಕ್ಕೆ ವರ್ಗಾಯಿಸದಿದ್ದಲ್ಲಿ ಅನಾಹುತಗಳೇನಾದರೂ ನಡೆದರೆ ಸರ್ಕಾರವೆ ಹೊಣೆಯಾಗಬೇಕಾಗುತ್ತದೆ. ಮಳೆಯಿಂದ ಕಡತಗಳ ರಕ್ಷಣೆ ಕೂಡ ಆಗಬೇಕಾಗಿದೆ ಎಂದು ಜನರು ಆಗ್ರಹಿಸಿದ್ದಾರೆ.