ಜೊಯಿಡಾ: ತಾಲೂಕಿನ ನಂದಿಗದ್ದಾ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ರಾಮಕೃಷ್ಣ ದಾನಗೇರಿ, ಉಪಾಧ್ಯಕ್ಷರಾಗಿ ಸುದರ್ಶನ ಭಾಗ್ವತ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಗಳಾದ ಎಮ್.ಬಿ.ಹತ್ತರಗಿ ಹಾಗೂ ಸಜ್ಜನ್ ಅವರ ಸಮ್ಮಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ರಾಮಕೃಷ್ಣ ದಾನಗೇರಿ, ಮುಂದಿನ ಐದು ವರ್ಷಗಳಲ್ಲಿ ಸಂಘ ಇನ್ನು ಹೆಚ್ಚಿನ ಲಾಭಗಳಿಸುವಂತಾಗಬೇಕು, ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ಸಂಘದಲ್ಲಿ ಸಾಲ ಸಿಗುವಂತೆ ಹಾಗೂ ಸಂಘದ ಸದಸ್ಯರಿಗೆ ಸಂಘದ ವತಿಯಿಂದ ಕಾನೂನಿನ ಚೌಕಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಎನ್.ವಿ.ಹೆಗಡೆ, ಸಂಘದ ಕಾರ್ಯನಿರ್ವಾಹಕ ಶಿವರಾಮ ದಬ್ಗಾರ ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.