Slide
Slide
Slide
previous arrow
next arrow

ರುದ್ರವೀಣಾ ವಾದಕಿ ಮೇಘನಾ ಹೆಗಡೆಗೆ ಕೇಂದ್ರ‌ ಪುರಸ್ಕಾರ

300x250 AD

ಶಿರಸಿ: ಯುವ ಸಿತಾರ್ ಹಾಗೂ ರುದ್ರವೀಣಾ ವಾದಕಿ ಮೇಘನಾ ಹೆಗಡೆ ಅವರಿಗೆ ಭಾರತ ಸರಕಾರ ನೀಡುವ ವಿದ್ಯಾರ್ಥಿ ವೇತನ ಪುರಸ್ಕಾರ ಪ್ರಕಟವಾಗಿದೆ.
ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ (ಸಿಸಿಆರ್ಟಿ) ನಡೆಸಿದ 2021- 22ನೇ ಸಾಲಿನ ಯುವ ಪ್ರತಿಭಾ ಶೋಧದ ಸಂಗೀತ ವಿಭಾಗದಲ್ಲಿ ಈ ಆಯ್ಕೆಗೆ ಭಾಜನಳಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಏಕೈಕ ವಿದ್ಯಾರ್ಥಿಯಾಗಿ ಸಂಗೀತ ವಿಭಾಗದಲ್ಲಿ ಆಯ್ಕೆಯಾದ ಮೇಘನಾ ಹೆಗಡೆ ಕಳೆದ ಒಂಬತ್ತು ವರ್ಷಗಳಿಂದ ಪ್ರಸಿದ್ಧ ರುದ್ರ ವೀಣಾ ವಾದಕ ಪಂಡಿತ್ ಆರ್.ವಿ. ಹೆಗಡೆ ಅವರ ಶಿಷ್ಯರಾಗಿ ಸಿತಾರ್ ಹಾಗೂ 6 ವರ್ಷದಿಂದ ರುದ್ರವೀಣೆ ಅಭ್ಯಾಸ ಮಾಡುತ್ತಿದ್ದಾರೆ.
ಇವರು ನಗರದ ಮಾನಸಾ ಪೇಪರ್ಸನ ಪರಮೇಶ್ವರ ಹೆಗಡೆ ಹಾಗೂ ಪಾರ್ವತಿ ಹೆಗಡೆ ಪುತ್ರಿ. ಪ್ರಸಕ್ತ ರುದ್ರವೀಣೆಯಲ್ಲಿ ಈ ಸಾಧನೆ ಮಾಡಿದ‌ ದೇಶದ ಏಕೈಕ ಪ್ರತಿಭೆ ಆಗಿರುವದು ವಿಶೇಷವಾಗಿದೆ. ಪ್ರಸ್ತುತ ಮೇಘ‌ನಾ ಅವರು ಎಂಇಎಸ್ ಚೈತನ್ಯ ಪಿಯು ಕಾಲೇಜಿನಲ್ಲಿ ಉಪನ್ಯಾಸಕಿ ಆಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top