ಕಾರವಾರ: ವಿಮಾ ಸಂಸ್ಥೆಯವರು ತಿರಸ್ಕರಿಸಿದ ಬೆಳೆವಿಮೆ ರೈತರ ಯಾದಿಯನ್ನು ಸಂಬ0ಧಪಟ್ಟ ಗ್ರಾಮ ಪಂಚಾಯತ ಹಾಗೂ ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕದಲ್ಲಿ ಲಗತ್ತಿಸಲಾಗಿದೆ.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ 2021-22ರ ಮುಂಗಾರು ಹಂಗಾಮಿ ಬೆಳೆ ವಿಮೆ ಮೊದಲನೇ ಬಾರಿ ಬೆಳೆ ಸಮೀಕ್ಷೆಯ ದತ್ತಾಂಶವನ್ನು ಬೆಳೆ ನೋಂದಣಿಯಾದ ಪ್ರಸ್ತಾವನೆಗಳೊಂದಿಗೆ ಹೋಲಿಕೆ ಮಾಡಿ ತಾಳೆಯಾಗದೇ ಇರುವ ಪ್ರಸ್ತಾವನೆಯನ್ನು ಅಂತಿಮವಾಗಿ ವಿಮಾ ಸಂಸ್ಥೆಯವರು ತಿರಸ್ಕರಿಸಿದ್ದಾರೆ. ರೈತರು ಅವರ ವಿಮಾ ಅರ್ಜಿ ತಿರಸ್ಕೃತಗೊಂಡ ಬಗ್ಗೆ ಜುಲೈ 18ರೊಳಗಾಗಿ ಆಕ್ಷೇಪಣೆ ಇದ್ದಲ್ಲಿ ಮರು ಪರಿಶೀಲನೆಗಾಗಿ ಮನವಿಯನ್ನು ಕಛೇರಿಗೆ ಸಲ್ಲಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.