Slide
Slide
Slide
previous arrow
next arrow

ಅನುದಾನದ ಅಡಿಯಲ್ಲಿ ಸೌರಚಾಲಿತ ಹಾಲು ಕರೆಯುವ ಯಂತ್ರ ನೀಡಿದ್ದು ರಾಜ್ಯದಲ್ಲೇ ಮೊದಲು: ಸುರೇಶ್ಚಂದ್ರ ಕೆಶಿನ್ಮನೆ

300x250 AD

ಶಿರಸಿ: ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಕಲ್ಯಾಣ ಸಂಘದ ವತಿಯಿಂದ ಅರ್ಹ ಹಾಲು ಉತ್ಪಾದಕರಿಗೆ ಅನುದಾನದ ಅಡಿಯಲ್ಲಿ ನೀಡಲಾಗುವ ಸೌರ ಚಾಲಿತ ಹಾಲು ಕರೆಯುವ ಯಂತ್ರವನ್ನು ಶಿರಸಿ ತಾಲೂಕಿನ ಇಟಗುಳಿ ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಉತ್ಪಾದಕರಾದ ಭಾರತಿ ವೆಂಕಟ್ರಮಣ ಹೆಗಡೆ ಅವರಿಗೆ ವಿತರಿಸಲಾಯಿತು. ಹಾಗೂ ಅವರ ಮನೆಯಲ್ಲಿ ಸೆಲ್ಕೋ ಕಂಪನಿಯ ಸುಬ್ರಾಯ ಹೆಗಡೆ ಮತ್ತು ಕ್ಷೀರ ಕಂಪನಿಯ ಚಂದ್ರಶೇಖರ ಅವರು ಸೌರ ಚಾಲಿತ ಹಾಲು ಕರೆಯುವ ಯಂತ್ರದ ಪ್ರಾತ್ಯಕ್ಷಿಕೆ ನೀಡಿದರು.

ಧಾರವಾಡ ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ ಧಾರವಾಡ ಸಹಕಾರ ಹಾಲು ಒಕ್ಕೂಟದಿಂದ ಸೌರ ಚಾಲಿತ ಹಾಲು ಕರೆಯುವ ಯಂತ್ರವನ್ನು ಅನುದಾನದ ಅಡಿಯಲ್ಲಿ ನೀಡುತ್ತಿರುವುದು ರಾಜ್ಯದಲ್ಲಿ ಇದೇ ಮೊದಲಾಗಿದ್ದು, ನಮ್ಮ ಧಾರವಾಡ ಹಾಲು ಒಕ್ಕೂಟ ಹಾಗೂ ಕಲ್ಯಾಣ ಸಂಘದ ಸಹಯೋಗದೊಂದಿಗೆ ಸಾಧ್ಯವಾಗಿದೆ ಎಂದರು. ಉತ್ತರಕನ್ನಡ ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ಮಳೆಗಾಲದ ಸಮಯದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದರಿಂದ ಹಾಲು ಉತ್ಪಾದಕರಿಗೆ ತೊಂದರೆ ಉಂಟಾಗುತ್ತಿರುವುದನ್ನು ಗಮನಿಸಿ ಹಾಲು ಉತ್ಪಾದಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಹಾಲು ಕರೆಯುವ ಯಂತ್ರಕ್ಕೆ ಸೌರ ವಿದ್ಯುತ್‌ ಸಂಪರ್ಕವನ್ನು ನೀಡಿ ಕಲ್ಯಾಣ ಸಂಘದಿಂದ ಧಾರವಾಡ ಸಹಕಾರ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಒಟ್ಟೂ 42 ಹಾಗೂ ಜಿಲ್ಲೆಯ 14 ಜನ ಅರ್ಹ ಹಾಲು ಉತ್ಪಾದಕರಿಗೆ ಸೌರ ಚಾಲಿತ ಹಾಲು ಕರೆಯುವ ಯಂತ್ರವನ್ನು ಈಗಾಗಲೇ ನೀಡಲಾಗಿದೆ ಎಂದರು. ಸೌರ ಚಾಲಿತ ಹಾಲು ಕರೆಯುವ ಯಂತ್ರದ ಮೊತ್ತ ಒಟ್ಟಾರೆಯಾಗಿ ರೂ. 63,000/- ಗಳಷ್ಟಾಗುತ್ತಿದ್ದು, ಕಲ್ಯಾಣ ಸಂಘದಿಂದ ಶೇ. 50 ರಷ್ಟಂತೆ ರೂ. 31,500/- ಗಳ ಅನುದಾನ ನೀಡಲಾಗುತ್ತಿದ್ದು, ಇನ್ನುಳಿದ ರೂ. 31,500/- ಗಳನ್ನು ಹಾಲು ಉತ್ಪಾದಕರು ಹಾಲು ಸಂಘಗಳ ಮೂಲಕ ಒಕ್ಕೂಟಕ್ಕೆ ಪಾವತಿಸಬೇಕಾಗಿದ್ದು, ಹಾಲು ಕರೆಯುವ ಯಂತ್ರದ ಜೊತೆಗೆ ನೀಡಲಾಗುವ ಸೌರ ವಿದ್ಯುತ್‌ನ್ನು ಶೇಖರಿಸುವ ರೂ.25,000/- ಮೊತ್ತದ ಸೋಲಾರ್‌ ಪ್ಯಾನೆಲ್‌ನ್ನು ಸಹ ಹಾಲು ಉತ್ಪಾದಕರಿಗೆ ಕಲ್ಯಾಣ ಸಂಘದಿಂದ ಉಚಿತವಾಗಿ ನೀಡಲಾಗಿದೆ ಎಂದರು. ಜಿಲ್ಲೆಯ ಹಾಲು ಉತ್ಪಾದಕರು ಸೌರ ಚಾಲಿತ ಹಾಲು ಕರೆಯುವ ಯಂತ್ರದ ಪ್ರಯೋಜನ ಪಡೆಯಲು ತಿಳಿಸಿದರು.

ಸೌರ ಚಾಲಿತ ಹಾಲು ಕರೆಯುವ ಯಂತ್ರದ ಬಗ್ಗೆ ಮಾಹಿತಿ ನೀಡಿದ ಸೆಲ್ಕೋ ಕಂಪನಿಯ ಸುಬ್ರಾಯ ಹೆಗಡೆ ಅವರು ಹಾಲು ಕರೆಯುವ ಯಂತ್ರದಲ್ಲಿ ಆಹಾರ ಸಂರಕ್ಷಣಾ ಕಾಯ್ದೆಯ ಪ್ರಕಾರ ಉತ್ತಮ ಗುಣಮಟ್ಟದ ಸ್ಟೀಲ್‌ ಉಪಕರಣಗಳು, ಆಹಾರ ದರ್ಜೆಯ ಪೈಪ್‌ ಹಾಗೂ ಸಿಲಿಕಾನ್‌ ಗ್ಯಾಸ್ಕೆಟ್‌ ಬಳಸಲಾಗಿರುತ್ತದೆ. 150 ವಾಟ್‌ ಸಾಮರ್ಥ್ಯ ಹೊಂದಿದ ಯಂತ್ರ ಇದಾಗಿದ್ದು, 12 ವೋಲ್ಟ್‌ ಡಿಸಿ ಮೋಟಾರ್‌ನ್ನು ಹೊಂದಿದ್ದು, 10 ಆಕಳ ಹಾಲನ್ನು ಕರೆಯುವ ಕ್ಷಮತೆಯಿದ್ದು, 4 ರಿಂದ 7 ನಿಮಿಷದೊಳಗಾಗಿ ಒಂದು ಆಕಳಿನ ಹಾಲನ್ನು ಕರೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.

300x250 AD

ಈ ಸಂದರ್ಭದಲ್ಲಿ ಧಾರವಾಡ ಸಹಕಾರ ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥರಾದ ಎಸ್‌.ಎಸ್‌.ಬಿಜೂರ್‌, ವಿಸ್ತರಣಾಧಿಕಾರಿಗಳಾದ ಮೌನೇಶ ಎಂ ಸೋನಾರ, ವಿಸ್ತರಣಾ ಸಮಾಲೋಚಕರಾದ ಜಯಂತ ಪಟಗಾರ, ಫಲಾನುಭವಿ ಭಾರತಿ ವೆಂಕಟ್ರಮಣ ಹೆಗಡೆ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top