• Slide
    Slide
    Slide
    previous arrow
    next arrow
  • ಜು.13ಕ್ಕೆ ನೇರಗೋಡದಲ್ಲಿ ಸಮಯಮಿತಿ ಯಕ್ಷಗಾನ ತಾಳಮದ್ದಲೆ

    300x250 AD

    ಸಿದ್ದಾಪುರ: ಶ್ರೀ ಕ್ಷಿಪ್ರ ಪ್ರಸಾದ ವರದ ಗಣಪ ಯಕ್ಷಗಾನ ತಾಳ ಮದ್ದಲಾ ಕೂಟ, ಕೋಡಖಂಡ, ಹೊಸ್ತೋಟ ಹಾಗೂ ಅತಿಥಿ ಕಲಾವಿದರ ಸಹಯೋಗದಲ್ಲಿ ಜು.13,ಗುರುವಾರದಂದು, ಸಂಜೆ 4.30 ಗಂಟೆಗೆ, ತಾಲೂಕಿನ ನೇರಗೋಡದ ಶ್ರೀ ಕದಂಬೇಶ್ವರ ದೇವಸ್ಥಾನ ಆವಾರದಲ್ಲಿ ‘ಶ್ರೀರಾಮ ವನಾಭಿಗಮನ’ ಮತ್ತು ‘ಪಾದುಕಾ ಪ್ರದಾನ’ ಸಮಯಮಿತಿ ಯಕ್ಷಗಾನ ತಾಳಮದ್ದಲೆ ಆಯೋಜಿಸಲಾಗಿದೆ.

    ಅತಿಥಿ ಕಲಾವಿದರಾಗಿ ಹಿಮ್ಮೇಳದಲ್ಲಿ ಭಾಗವತರಾಗಿ ಯಕ್ಷಮಾಣಿಕ್ಯ ಕುಮಾರಿ ಚಿಂತನಾ ಹೆಗಡೆ, ಮಾಳ್ಕೋಡು, ಹೊನ್ನಾವರ, ಗಣೇಶ ಯಾಜಿ ಇಡಗುಂಜಿ, ಮದ್ದಳೆಯಲ್ಲಿ ಮಂಜುನಾಥ ಹೆಗಡೆ ಗುಡ್ಡೆದಿಂಬ, ಚಂಡೆಯಲ್ಲಿ ಕುಮಾರ ಶ್ರೀವತ್ಸ ಹೆಗಡೆ ಗುಡ್ಡೆದಿಂಬ ಪಾಲ್ಗೊಳ್ಳಲಿದ್ದಾರೆ.

    ಅತಿಥಿ ಕಲಾವಿದರಾಗಿ ಮುಮ್ಮೇಳದಲ್ಲಿ ಅರುಣಕುಮಾರ ಬೆಂಕ್ಟವಳ್ಳಿ, ಸಾಗರ, ಇಟಗಿ ಮಹಾಬಲೇಶ್ವರ ಭಟ್ಟ, ಮಂಜುನಾಥ ಗೊರಮನೆ, ಇವರೊಂದಿಗೆ ಸಂಘದ ಯಾವತ್ತು ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.

    ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ಕೋರಲಾಗಿದೆ.

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top