ಶಿರಸಿ: ನಮ್ಮ ಸಮಾಜ ಯಂತ್ರ, ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದರು ಹೆಣ್ಣಿನ ವಿಷಯದಲ್ಲಿ ಮಾತ್ರ ತಾರತಮ್ಯ ಭಾವನೆಯನ್ನು ತಳೆದಿದೆ. ಅವರು ಎದ್ದು ನಿಂತಾಗ ವಿವಿಧ ರೀತಿಯ ದೌರ್ಜನ್ಯವನ್ನ ನೀಡಿ ಹತ್ತಿಕ್ಕಲಾಗುತ್ತಿದೆ. ಆರ್ಥಿಕ ಸ್ವಾವಲಂಬನೆ ಸ್ತ್ರೀಯರು ವಿವೇಚನೆ ಹೊಂದಲು ಒಂದು ಮಾರ್ಗವಾಗಿದೆ ಎಂದು ಕವಯತ್ರಿ, ಕಥಾಗಾತ್ರಿ ಸಿಂಧು ಹೆಗಡೆ ಹೇಳಿದರು. ಅವರು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಕನ್ನಡ ಹಾಗೂ ಸಮಾಜಶಾಸ್ತ್ರ ವಿಭಾಗದವರು ಏರ್ಪಡಿಸಿದ ಲಿಂಗ ಸಮಾನತೆ ಎಂಬ ವಿಷಯದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಟಿ.ಎಸ್. ಹಳೆಮನೆ, ಮಾತನಾಡಿ ನಾವು ಶಿಕ್ಷಣವನ್ನು ಪಡೆದು ಲಿಂಗಸಮಾನತೆಯನ್ನು ಸ್ಥಾಪಿಸುವರಾಗಬೇಕು. ಹೆಣ್ಣನ್ನು ಕೀಳಾಗಿ ಕಾಣುವ ಪುರುಷರ ಮನೋಭಾವ ಬದಲಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಡಾ.ಆರ್.ಆರ್. ಹೆಗಡೆ , ಸಮಾಜಶಾಸ್ತ್ರ ವಿಭಾಗದ ಪ್ರೊ.ಜಿ.ಟಿ.ಭಟ್ ಉಪಸ್ಥಿತರಿದ್ದರು. ಕುಮಾರಿ ಮಧುರ ಕಾರ್ಯಕ್ರಮ ನಿರ್ವಹಣೆ ಮಾಡಿದರು.