ಸಾಂಪ್ರದಾಯಿಕ ತರಕಾರಿ ಬೀಜ ಮೇಳ
(ಉತ್ತರ ಕನ್ನಡ ಸಾವಯವ ಒಕ್ಕೂಟ ಹಾಗೂ ವನಸ್ತ್ರೀ ಸಂಸ್ಥೆಯವರ ಸಹಯೋಗದಲ್ಲಿ)
ದಿನಾಂಕ :14 ಮತ್ತು 15 ಜುಲೈ 2023
ಸ್ಥಳ : ಉತ್ತರ ಕನ್ನಡ ಸಾವಯವ ಒಕ್ಕೂಟ
ಪಿಎಲ್ ಡಿ ಬ್ಯಾಂಕ್ ಕಟ್ಟಡ, ಎ. ಪಿ ಎಮ್. ಸಿ ಯಾರ್ಡ್ ಶಿರಸಿ ( ಟಿ. ಆರ್. ಸಿ ಬ್ಯಾಂಕ್ ಪಕ್ಕ )
ಸಮಯ ಬೆಳಿಗ್ಗೆ 10.30 ರಿಂದ ಸಂಜೆ 6 ಗಂಟೆ
ರೈತರು ಹಾಗೂ ರೈತ ಮಹಿಳೆಯರು ತಮ್ಮಲ್ಲಿರುವ ಗುಣಮಟ್ಟದ ಸಾಂಪ್ರದಾಯಿಕ ತರಕಾರಿ ಬೀಜ/ ತರಕಾರಿ ಸಸಿಗಳನ್ನ ಮುಂಚಿತವಾಗಿ ಹೆಸರು ನೊಂದಾಯಿಸಿಕೊಂಡು ತರಕಾರಿ ಬೀಜ ಮೇಳದಲ್ಲಿ ಮಾರಾಟ ಮಾಡಬಹುದು.
ಮೇಳದ ವಿಶೇಷತೆಗಳು:
- ಕೈತೋಟದಲ್ಲಿ ಅಭಿವೃದ್ಧಿಪಡಿಸಿದ ಸಾಂಪ್ರದಾಯಿಕ ತರಕಾರಿ ಬೀಜಗಳು.
- ವಿವಿಧ ತಳಿಯ ಹೂವಿನ ಗಿಡಗಳು/ ಸಸಿಗಳು
- ವಿವಿಧ ಗೃಹ ಉತ್ಪನ್ನಗಳು.
ಮೇಳದ ಷರತ್ತುಗಳು:
- ರಾಸಾಯನಿಕ ಉಪಯೋಗಿಸಿದ ತರಕಾರಿ ಬೀಜಗಳನ್ನು / ತರಕಾರಿ ಬೀಜ ಕಂಪನಿಗಳ ತರಕಾರಿ ಬೀಜಗಳನ್ನು ಮಾರಾಟಕ್ಕೆ ತರುವಂತಿಲ್ಲ.
- ವಾಣಿಜ್ಯ ಉದ್ದೇಶದ ನರ್ಸರಿಗಳಿಂದ ಸಸಿಗಳನ್ನು ತರುವಂತಿಲ್ಲ. ಮನೆಯಲ್ಲೇ ಬೆಳೆಸಿದ ಸಸಿಗಳನ್ನು ಅಥವಾ ತರಕಾರಿ ಬೀಜಗಳನ್ನು ತರಬಹುದು.
- ಮಾರಾಟಕ್ಕೆ ತರುವ ಗೃಹ ಉತ್ಪನ್ನಗಳಲ್ಲಿ ಕೃತಕ ಬಣ್ಣಗಳನ್ನು ಹಾಗೂ ರಾಸಾಯನಿಕಗಳನ್ನು ಉಪಯೋಗಿಸುವಂತಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ: