ಹೊನ್ನಾವರ: ತಾಲೂಕಿನಲ್ಲಿ ಕಳೆದೆರಡು ದಿನದಿಂದ ಮುಂಗಾರು ಆರ್ಭಟ ಜೋರಾಗಿದ್ದು, ಗುರುವಾರವು ಗಾಳಿ ಮಳೆಗೆ ವಿವಿಧೆಡೆ ಹಾನಿಯಾಗಿದೆ.
ತಾಲೂಕಿನ ಹಿನ್ನೂರಿನ ಸುಬ್ಬಿ ಸುಬ್ರಾಯ ನಾಯ್ಕ ಇವರ ಮನೆ ಮೇಲೆ ತೆಂಗಿನ ಮರ ಬಿದ್ದು ಅಂದಾಜು 31,500 ಹಾನಿಯಾಗಿದೆ. ಮೊಳ್ಕೋಡ ಗಣಪತಿ ನಾಯ್ಕ ಇವರ ಮನೆ ಮೇಲೆ ತೆಂಗಿನ ಮರಬಿದ್ದು ಮೇಲ್ಛಾವಣಿ ಕುಸಿದಿದ್ದು, ಅಂದಾಜು 23000 ಹಾನಿಯಾಗಿದೆ. ಪಟ್ಟಣದ ಗುಣಗುಣಿಕೇರಿಯ ಜಟ್ಟು ಗೌಡ ಮನೆ ಮೇಲೆ ಸಾಗವಾನಿ ಮರ ಬಿದ್ದು 30ಸಾವಿರ ಹಾನಿಯಾಗಿದೆ.
ಪಟ್ಟಣದ ರಥಬೀದಿಯ ಪ್ರಶಾಂತ ಶೇಟ್ ಇವರ ಮನೆಯ ಮೇಲೆ ತೆಂಗಿನ ಮರ ಬಿದ್ದು, ಮೇಲ್ಛಾವಣೆಯ ಹಾರಿ ಹೋಗಿದ್ದು ಅಂದಾಜು 30 ಸಾವಿರ ಹಾನಿಯಾಗಿದೆ. ಸಾಲ್ಕೋಡ್ ಗ್ರಾಮದ ಮುಲ್ಲೆಮಕ್ಕಿಯ ರಾಮಚಂದ್ರ ನಾಯ್ಕ ಇವರ ಮನೆ ಮೇಲೆ ಅಡಿಕೆ ಮರ ಬಿದ್ದು ಅಂದಾಜು 15 ಸಾವಿರ ಹಾನಿಯಾಗಿದೆ. ತಾಲೂಕಿನಲ್ಲಿ 131.1ಮೀ.ಮೀಟರ್ ಮಳೆಯಾಗಿದ್ದು, ಇದುವರೆಗೆ 1404.4ಮೀ.ಮೀಟರ್ ಮಳೆಯಾಗಿರುವ ಮಾಹಿತಿ ಅಧಿಕಾರಿಗಳು ತಿಳಿಸಿದ್ದಾರೆ.