ಶಿರಸಿ: ತಾಲೂಕಿನ ಬಿಸಾಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ ಇತ್ತೀಚಿಗೆ ವಿದ್ಯಾ ಪ್ರೋತ್ಸಾಹ ನಿಧಿ ವಿತರಣೆ ಕಾರ್ಯಕ್ರಮ ನಡೆಯಿತು. ಬಡ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಡಾಕ್ಟರ್ ವಿನಾಯಕ್ ಈಶ್ವರನ್ ತಮ್ಮ ತಂದೆಯವರಾದ ಸುಬ್ರಹ್ಮಣ್ಯಂ ಹೆಸರಿನಲ್ಲಿ ಅವರ ತಾಯಿಯವರು ನೀಡುವ ಪ್ರೋತ್ಸಾಹ ನಿಧಿ ವಿತರಿಸಿದರು. ಪ್ರಾರಂಭದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗಣೇಶ್ ಭಟ್ ವಾನಳ್ಳಿ ಎಲ್ಲರನ್ನೂ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡುತ್ತಾ ನಮ್ಮಲ್ಲಿ ಬಡ ವಿದ್ಯಾರ್ಥಿಗಳೇ ಜಾಸ್ತಿ ಇದ್ದಾರೆ. ಇವರಿಗೆ ಅನುಕೂಲವಾಗಲೆಂದು ಮಾನ್ಯರಲ್ಲಿ ವಿನಂತಿಸಿದಾಗ ಅತಿ ಪ್ರೀತಿಯಿಂದ ನಮ್ಮ ಶಾಲೆಯ ಮಕ್ಕಳಿಗೆ ಉತ್ತಮ ಮೊತ್ತವನ್ನು ನೀಡಿದ್ದಾರೆ. ಈ ಹಣವನ್ನು ವಿದ್ಯೆಗಾಗಿ ಮಾತ್ರ ಬಳಸಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ದತ್ತಿನಿಧಿ ವಿತರಿಸಿ ಡಾಕ್ಟರ್ ವಿನಾಯಕ್ ಮಾತನಾಡುತ್ತಾ ನೀಡಿದ ಸಹಾಯವನ್ನು ಸ್ಮರಿಸುವ ಮತ್ತು ಮುಂದೆ ಇತರರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಿ ಅಲ್ಲದೆ 10ನೇ ತರಗತಿ ಓದುತ್ತಿರುವ ಮಕ್ಕಳ ಮೇಲೆ ಅತಿಹೆಚ್ಚಿನ ನಿರೀಕ್ಷೆ ಜವಾಬ್ದಾರಿ ಇರುವುದು ಅಷ್ಟೇ ಮಾತ್ರವಲ್ಲ 9ನೇ ತರಗತಿ ಓದುತ್ತಿರುವ ಮಕ್ಕಳು ಮುಂದಿನ ಪರೀಕ್ಷೆಗೆ ಈಗಲೇ ಸಿದ್ದರಾಗಬೇಕು ಆ ದಿಸೆಯಲ್ಲಿ ಪ್ರಯತ್ನಿಸಿ ಎಂದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಎಸ್ಎಂ ಹೆಗಡೆ ಹುಡೆಲಕೊಪ್ಪ, ದೀಪದಿಂದ ದೀಪ ಬೆಳಗುವಂತೆ ಸಹಾಯ ಪಡೆದ ನೀವುಗಳು ಮುಂದೆ ಇತರರಿಗೆ ಸಹಾಯ ಮಾಡುವಂತೆ ಆಗಲಿ ಎಂದು ಆಶಿಸಿದರು. ನಂತರ ಡಾಕ್ಟರ್ ವಿನಾಯಕ ಇವರನ್ನು ಸನ್ಮಾನಿಸಲಾಯಿತು. ಬಿ.ಎಂ.ಭಜಂತ್ರಿ ನಿರ್ವಹಿಸಿದರೆ ಶಿಕ್ಷಕಿ ಶ್ರೀಮತಿ ಸವಿತಾ ಭಟ್ ವಂದಿಸಿದರು ಕಾರ್ಯಕ್ರಮದಲ್ಲಿ ಮಕ್ಕಳು ಪಾಲಕರು ಶಿಕ್ಷಕರು ಹಾಜರಿದ್ದರು.