ಅಂಕೋಲಾ: ಈಡಿಗ ಸಮಾಜವು ರಾಜ್ಯದಲ್ಲಿ 4ನೇ ಸ್ಥಾನದಲ್ಲಿದ್ದು, ಸಾಕಷ್ಟು ಅಭಿವೃದ್ಧಿಯನ್ನು ಹೊಂದಬೇಕಾಗಿದೆ. ಹೀಗಾಗಿ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಮತ್ತು ಉನ್ನತ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಈ ನಿಟ್ಟಿನಲ್ಲಿ ಪ್ರಣವಾನಂದ ಶ್ರೀಗಳು ಕೂಡ ಹೋರಾಟ ಮಾಡುತ್ತಿದ್ದಾರೆ. ಇನ್ನು ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕರಿಸಿರುವುದು ಶ್ಲಾಘನೀಯ ಎಂದು ನಾಮಧಾರಿ ಸಮಾಜದ ಮುಖಂಡ ರಾಜೇಂದ್ರ ವಿ.ನಾಯ್ಕ ಹೇಳಿದರು.
ರಾಷ್ಟ್ರೀಯ ಈಡಿಗ ಮಹಾಮಂಡಳಿ ತಾಲೂಕು ಘಟಕದವರು ಪಟ್ಟಣದ ಪಿ.ಎಂ.ಪ್ರೌಢಶಾಲಾ ರೈತ ಭವನದ ಶ್ರೀನಾರಾಯಣಗುರು ವೇದಿಕೆಯಲ್ಲಿ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರದಲ್ಲಿ ಅವರು ಮಾತನಾಡಿದರು. ಇಂಜಿನೀಯರ್ ರಮಾನಂದ ನಾಯ್ಕ ಕೊಂಡಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸಿದಾಗ ಓದುವುದರ ಬದಲು ತಮ್ಮ ಕಲಿಕೆಯ ಸಮಯದಲ್ಲಿ ಪ್ರತಿದಿನವೂ ಪರೀಕ್ಷೆಯೇ ಎಂಬ0ತೆ ಸಿದ್ಧತೆ ಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಯನ್ನು ಮಾಡಿಕೊಳ್ಳುವುದರ ಜತೆಗೆ ಕೋಚಿಂಗ್ ಕ್ಲಾಸ್‌ಗಳಿಗೆ ತೆರಳಿ ತಮ್ಮ ಜೀವನವನ್ನು ಭದ್ರಪಡಿಸಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ಡಿ.ಜಿ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಮಾದೇವ ಎಂ. ನಾಯ್ಕ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕೊಂಡಳ್ಳಿ, ವೈದ್ಯ ಡಾ. ಕರುಣಾಕರ ನಾಯ್ಕ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮಾತನಾಡಿದರು.
ಅನನ್ಯ, ಸಾಕ್ಷಿ ಪ್ರಾರ್ಥಿಸಿದರು. ಉಪಾಧ್ಯಕ್ಷರಾದ ಉಮೇಶ ಎನ್. ನಾಯ್ಕ ಸ್ವಾಗತಿಸಿದರು. ಸಂಜಯ ಆರ್. ನಾಯ್ಕ ಬಹುಮಾನ ಯಾದಿ ವಾಚಿಸಿದರು. ಯುವ ಅಧ್ಯಕ್ಷ ಮಂಜುನಾಥ ಕೆ. ನಾಯ್ಕ ನೆನಪಿನ ಕಾಣಿಯೆ ಯಾದಿ ವಾಚಿಸಿದರು. ನಾಗರಾಜ ಮಂಜಗುಣಿ ನಿರ್ವಹಿಸಿದರು. ರಮೇಶ ಎಸ್. ನಾಯ್ಕ ವಂದಿಸಿದರು. ಶ್ರೀಪಾದ ಟಿ. ನಾಯ್ಕ, ವಸಂತ ವಿ. ನಾಯ್ಕ, ಲೀಲಾವತಿ ಬಿ. ನಾಯ್ಕ ಉಪಸ್ಥಿತರಿದ್ದರು.