ಶಿವಮೊಗ್ಗ: ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದೆ, ಅನುಷ್ಟಾನದಲ್ಲಿ ವೈಫಲ್ಯವಾಗಿದೆ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ತಿರಸ್ಕಾರವಾಗಿರುವಂತಹ ಅರಣ್ಯವಾಸಿಗಳು ಭೂಮಿ ಹಕ್ಕಿಗಾಗಿ ಮೇಲ್ಮನವಿ ಸಲ್ಲಿಸುವುದು ಅನಿವಾರ್ಯ. ಭೂಮಿ ಹಕ್ಕಿಗಾಗಿ ಅರಣ್ಯವಾಸಿಗಳು ಕಾನೂನಾತ್ಮಕ ಹೋರಾಟಕ್ಕೆ ಬದ್ಧವಾಗಿರಬೇಕೆಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಸಾಗರ ತಾಲೂಕಿನ, ಜೋಗದ ಚಾಮುಂಡೇಶ್ವರಿ ದೇವಿಯ ಸಭಾಂಗಣದಲ್ಲಿ ಜರುಗಿದ ಅರಣ್ಯವಾಸಿಯ ಸಭೆಯನ್ನು ಉದ್ಧೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆಯು ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿವಿಧಾನ ಅನುಸರಿಸದೇ ಅರ್ಜಿಗಳು ತಿರಸ್ಕರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತಕ್ಷಣ ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದರು.
ಉಪವಿಭಾಗ ಅರಣ್ಯ ಹಕ್ಕು ಸಮಿತಿಯಲ್ಲಿ ನಾಮ ನಿರ್ದೇಶನ ಸದಸ್ಯರ ನೆಮೊನಕಿ ಇಲ್ಲದೇ ಹಾಗೂ ಮೂರು ತಲೆಮಾರಿನ ನಿರ್ದಿಷ್ಟ ದಾಖಲೆಗಳ ಅವಶ್ಯಕತೆ ಕುರಿತು ತಪ್ಪಾಗಿ ಅರ್ಥೈಯಿಸಲಾಗುತ್ತಿದೆ ಎಂದು ಕೇಂದ್ರ ಸರಕಾರದ ಬುಡಕಟ್ಟು ಮಂತ್ರಾಲಯದಿ0ದ ಸ್ಪಷ್ಟ ಸೂಚನೆ ಇದ್ದಾಗಲೂ, ಸಮಿತಿಗಳು ಅರ್ಜಿ ತಿರಸ್ಕರಿಸುತ್ತಿರುವುದು ಖೇದಕರ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಗಲ್ ಗ್ರಾಮ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಎಸ್.ಎಲ್ ರಾಜಕುಮಾರ ಸಭೆಯಲ್ಲಿ ಅಧ್ಯಕ್ಷತೆಯನ್ನ ವಹಿಸಿದ್ದರು. ರಾಜ್ಯ ಹೋರಾಟಗಾರರಾಗಿರುವ ತಿ.ನ ಶ್ರೀನಿವಾಸ ಮೂರ್ತಿ ಕಾನೂನಿಂದ ಹೋರಾಟ ಮಾಡಿದ್ದಲ್ಲಿ ಮಾತ್ರ ಅರಣ್ಯ ಭೂಮಿ ಹಕ್ಕು ದೊರಕಲು ಸಾಧ್ಯ ಈ ದಿಶೆಯಲ್ಲಿ ಅರಣ್ಯವಾಸಿಗಳು ಸಂಘಟಿತ ಮತ್ತು ಕಾನೂನಾತ್ಮಕ ಹೋರಾಟ ಜರುಗಿಸಬೇಕೆಂದು ಅವರು ಹೇಳಿದರು.
ಸಭೆಯನ್ನು ಉದ್ದೇಶಿಸಿ ಕೇಶನ ಮೂರ್ತಿ, ನವೀನ್ ಜಾಲಿಗದ್ದೆ, ಜಗನಾಥ್ ಫಾತಿಮಪುರ, ಮಹಮ್ಮದ್ ಕೀಜಾರ್ ಮಾತನಾಡಿದರು. ಸಭೆಯಲ್ಲಿ ರಾಘು ಕವಂಚೂರು, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಲಕ್ಷ್ಮೀರಾಜ್, ಪ್ರಸನ್ನ ಕುಮಾರ, ದಿನೇಶ್ ನಾಯ್ಕ ಬೇಡ್ಕಣಿ, ಮಹಮ್ಮದ್ ರಪೀಕ್, ಸುನೀಲ್ ಸಂಪಖoಡ, ನಾಗರಾಜ ಮರಾಠಿ, ಕಾರ್ಲೂಯಿಸ್, ದೇವದಾಸ್, ವಾಣಿ, ವಾಲೆಂಟಿನ್ ಡಿಸೋಜಾ, ಮಂಜುಳಾ ಮುಂತಾದವರು ಉಪಸ್ಥಿತರಿದ್ದರು.