ಶಿರಸಿ: ಕುಮಟಾ ತಿರುಪತಿ ಬಸ್ ಸ್ಥಗಿತ ಮಾಡುವ ಸಾರಿಗೆ ಸಂಸ್ಥೆ ನಿರ್ಣಯಕ್ಕೆ ಶಿರಸಿ ನಿವಾಸಿ, ಹಾಲಿ ಬೆಂಗಳೂರಿನಲ್ಲಿ ನೆಲಸಿರುವ ಯುವಕನೊಬ್ಬ ಶಿರಸಿ ಶಾಸಕರಿಗೆ ಪತ್ರ ಬರೆದಿದ್ದಾನೆ. ಈ ಬಸ್ಸಿನಿಂದಾಗಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಸಹಕಾರಿಯಾಗಿದೆ ಎಂಬುದನ್ನ ತಿಳಿಸಿದ್ದಾನೆ.
ಪತ್ರದಲ್ಲಿ, ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸದ ನಿಮಿತ್ತ ವಾಸವಾಗಿರುತ್ತೇನೆ. ಆದಕಾರಣ ನಾನು ನನ್ನ ಊರಿಗೆ ಬಂದು ಹೋಗಲು ಕುಮಟಾ-ತಿರುಪತಿ ಬಸ್ಸಿನ ಸೇವೆಯನ್ನು ನಿರಂತರವಾಗಿ ಬಳಸಿಕೊಳ್ಳುತ್ತಾ ಬಂದಿರುತ್ತೇನೆ. ಅಲ್ಲದೇ, ನನ್ನಂತಹ ಹಲವಾರು ಶಿರಸಿ-ಸಿದ್ದಾಪುರ ನಾಗರೀಕರು ಈ ಸೇವೆಯ ಸದುಪಯೋಗವನ್ನು ಬಳಸಿಕೊಳ್ಳುತ್ತಿರುತ್ತಾರೆ. ಇಂತಹ ಸೇವೆಯನ್ನು ಒದಗಿಸಿದಂತಹ ತಮಗೆ ಹಾಗೂ ಸಾರಿಗೆ ಇಲಾಖೆಗೆ ತುಂಬು ಹೃದಯದ ಧನ್ಯವಾದಗಳು ಎಂದಿದ್ದಾರೆ.
ನಮ್ಮೆಲ್ಲ ಕೆಲಸ- ಕಾರ್ಯಗಳನ್ನು ಮುಗಿಸಿ ಬೆಂಗಳೂರಿನಿoದ ತವರೂರಿಗೆ ಪ್ರಯಾಣ ಬೆಳೆಸಲು ಇರುವ ದಿನದ ಕಡೆಯ ಬಸ್ಸ್ ಸಂಚಾರ ಸೇವೆ ಎಂದರೆ ತಪ್ಪಾಗಲಾರದು. ಕುಮಟಾದಿಂದ ಪ್ರತಿದಿನ ಸಂಜೆ 4 ಗಂಟೆಯಿoದ ತನ್ನ ಸೇವೆಯನ್ನು ಪ್ರಾರಂಭಿಸಿ ಶಿರಸಿಗೆ 5.30 ಗಂಟೆಗೆ ಬಂದು ತಲುಪುವ ಮಧ್ಯಮ ವರ್ಗದವರ ಬಸ್ಸು ಇದಾಗಿರುತ್ತದೆ. ಈ ಬಸ್ಸಿನಲ್ಲಿ ಹಲವಾರು ಬಾರಿ ಪ್ರಯಾಣಿಸಿರುವ ನನಗೆ ಬಸ್ಸ್ ನಿರ್ವಾಹಕರ, ಚಾಲಕರ ಸೇವೆಯು ಅತ್ಯತ್ತಮವಾಗಿದ್ದು ಅವರು ಪ್ರಯಾಣಿಕರೊಂದಿಗೆ ಸಹಕರಿಸುವ, ಬೆರೆಯುವ ರೀತಿ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತಾ ಬಂದಿದೆ. ಆದರೆ, ಈಗ ಬಸ್ಸಿನ ತಾಂತ್ರಿಕ ಕಾರಣಗಳಿಂದಾಗಿ ಈ ಸೇವೆಯನ್ನು ರದ್ದುಪಡಿಸುವ ನಿರ್ಣಯ ಕೈಗೊಂಡಿರುವ ಮಾತುಗಳು ಕೇಳಿಬರುತ್ತಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗಲಿದೆ ಎಂದಿದ್ದಾರೆ.
ಕೇವಲ ಬಸ್ಸಿನಲ್ಲಿರುವ ತಾಂತ್ರಿಕ ಮತ್ತು ಯಾಂತ್ರಿಕ ದೋಷಗಳಿಂದಾಗಿ ಕುಮಟಾ-ತಿರುಪತಿ ಮಾರ್ಗದ ಈ ಬಸ್ಸ್ ಸೇವೆಯನ್ನು ಸ್ಥಗಿತಗೊಳಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ದೋಷಪೂರಿತ ಬಸ್‌ಗಳ ಬದಲಾಗಿ ಚಾಲನೆಯಲ್ಲಿರುವ ಬಸ್ಸಗಳನ್ನು ಕುಮಟಾ-ತಿರುಪತಿ ಮಾರ್ಗದಲ್ಲಿ ಮುಂದುವರೆಸಿಕೊoಡು ಸಂಚಾರ ಸೇವೆಯನ್ನು ನಿರಂತರವಾಗಿರಿಸಬೇಕೆoದು ಕೋರಿದ್ದಾರೆ. ಇದು ಕೇವಲ ನನ್ನಂತಹ ಪ್ರಯಾಣಿಕರಲ್ಲದೆ, ಕೆಎಸ್‌ಆರ್‌ಟಿಸಿ ನಿರ್ವಾಹಕ ಹಾಗೂ ಚಾಲಕರ ಒತ್ತಾಯ ಕೂಡ ಆಗಿದೆ ಎಂದು ಶಾಸಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.