ಅಂಕೋಲಾ: ಪತಂಜಲಿ ಯೋಗಸಮೀತಿ ಹಾಗೂ ಭಾರತ್ ಸ್ವಾಭಿಮಾನ ಟ್ರಸ್ಟ ಹಾಗೂ ಅಂಕೋಲಾದ ವಿವಿಧ ಸಂಘಟನೆಯ ನೇತ್ರತ್ವದಲ್ಲಿ ಅಂತರಾಷ್ಟಿçÃಯ ಯೋಗದಿನಾಚರಣೆಯ ನಿಮಿತ್ತ ತಾಲೂಕಿನ ಅರ್ಬನ್ ಬ್ಯಾಂಕ್ ಮೊದಲನೆ ಮಹಡಿಯ ಮೇಲೆ ಜೂನ್ 17 ಶನಿವಾರದಿಂದ 21 ಬುದವಾರದವರೆಗೆ ಬೆಳಿಗ್ಗೆ 5-30 ರಿಂದ 7 ಘಂಟೆಯ ವರೆಗೆ ಉಚಿತ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಇದರ ಪ್ರಯೋಜನವನ್ನು ತಾಲೂಕಿನ ಸಾರ್ವಜನಿಕರು, ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಯೋಗಗುರುಗಳಾದ ವಿನಾಯಕ ಗುಡಿಗಾರ, ಅಭಯ ಮರಬಳ್ಳಿ, ರಾಜು ಹರಿಕಂತ್ರ ಕಣಗೀಲ, ಜೋಸ್ನಾ ನಾರ್ವೇಕರ ಮುಂತಾದವರು ಕೋರಿದ್ದಾರೆ.