ಶಿರಸಿ: ಉತ್ತಮ ಶಿಕ್ಷಣ ಬದುಕನ್ನು ಕಟ್ಟಿಕೊಡುತ್ತದೆ ಎಂದು ಲೋಕಧ್ವನಿ ದೈನಿಕದ ಸುದ್ದಿ ಸಂಪಾದಕಿ ವಿನುತಾ ಹೆಗಡೆ ಕಾನಗೋಡ ಹೇಳಿದರು.
ವಿದ್ಯಾಸ್ಫೂರ್ತಿ ಸಂಸ್ಥೆಯಿಂದ ಗುರುವಾರ ನಗರದ ವಾಸುಕಿ ಕಟ್ಟಡದಲ್ಲಿ ನಡೆದ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಸ್ವಾವಲಂಬಿಯಾಗಲು ಬಟ್ಟೆ ಹೊಲಿಗೆ ಅನ್ನುವುದು ವರದಾನ. ಅದನ್ನು ಕಲಿತು ಅದನ್ನೇ ಬದುಕಲ್ಲಿ ಯಶ ಸಾಧಿಸಲು ಸಾಧ್ಯ ಎಂದರು. ಹೊಲಿಗೆಯಂಥ ತರಬೇತಿಗಳು ಆರ್ಥಿಕ ಭದ್ರತೆ ಜೊತೆಗೆ ಮಾನಸಿಕ ಧೈರ್ಯವನ್ನು ನೀಡಬಲ್ಲದು. ಯಾವುದೇ ಉತ್ತಮ ಶಿಕ್ಷಣ ಬದುಕ ಟ್ಟಿಕೊಡಲು ಸಾಧ್ಯ ಎಂದ ಅವರು,
ಇಂಥ ತರಬೇತಿ ನಿಜಕ್ಕೂ ಉತ್ತಮ ಎಂದರು.
ನಗರಸಭೆ ಮಾಜಿ ಉಪಾಧ್ಯಕ್ಷೆ ವೀಣಾ ಶೆಟ್ಟಿ ಮಾತನಾಡಿ,
ಮಹಿಳೆಯವರಲ್ಲಿಯ ಕಲೆಯನ್ನು ಹೊರಹಾಕುವುದು ಇಂಥ ಕಾರ್ಯಗಳು. ಹೊಲಿಗೆಯನ್ನು ಎಂದಿಗೂ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕನ್ನು ಹಸನಾಗಿಸಿಕೊಳ್ಳಬಹುದು. ನಿಮಗೆ ಆಸಕ್ತಿ ಅವಶ್ಯ, ಅದರಲ್ಲಿ ಶ್ರದ್ಧೆ ಇಡಿ ಅದು ನಿಮ್ಮ ಬದುಕನ್ನು ಹಸನಾಗಿಸುತ್ತದೆ ಎಂದರು.
ಮನುವಿಕಾಸ ಸಂಸ್ಥೆ ಗಣಪತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರ್ಥಿಕ ಸ್ವಾವಲಂಬನೆ ಗೌರವವನ್ನು ತಂದುಕೊಡುವ ಜೊತೆಗೆ ಬದುಕಿನಲ್ಲಿ ಉನ್ನತಿ ನೀಡಬಲ್ಲದು. ನಿಮ್ಮ ನಿಮ್ಮ ಸಾಮರ್ಥ್ಯಕ್ಕೆ ನೀವು ಎಲ್ಲರೂ ಉತ್ತಮ ವಿದ್ಯಾರ್ಥಿಗಳಾಗಿ. ಉತ್ತಮಗಳಿಕೆ ಮಾಡುವಂತೆ ಕರೆ ನೀಡಿದರು.
ಶಿಕ್ಷಕ ಶಿಕ್ಷಕಿಯರ ನಿರಂತರ ಸಹಾಯವಾಣಿ ಗೌರವಾಧ್ಯಕ್ಷ ವಿಶ್ವನಾಥ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹೊಲಿಗೆ ತರಬೇತು ಶಿಕ್ಷಕಿ ಶ್ರೀಕಲಾ ನಾಯ್ಕ, ಅಶ್ವತ್, ಮಾದವ ಚಲವಾದಿ, ಕಾಮಧೇನು ಜ್ಯುವೆಲರಿ ಮಾಲಕ
ಬಾಬಣ್ಣ ಪಾಲನಕರ್ ಉಪಸ್ಥಿತರಿದ್ದರು.
ಚೇತನಾ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಹೊಲಿಗೆ ಸಾಮಗ್ರಿ ವಿತರಿಸಲಾಯಿತು.