Slide
Slide
Slide
previous arrow
next arrow

ಜು.8ಕ್ಕೆ ರಾಷ್ಟ್ರೀಯ ಬೃಹತ್ ಲೋಕ ಅದಾಲತ್: ನ್ಯಾ.ವಿಜಯಕುಮಾರ

300x250 AD

ಕಾರವಾರ: ಜುಲೈ 8ರಂದು ರಾಜ್ಯದ ಎಲ್ಲಾ ಜಿಲ್ಲಾದ್ಯಂತ ರಾಷ್ಟ್ರೀಯ ಬೃಹತ್ ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಉದ್ದೇಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಡಿ.ಎಸ್.ವಿಜಯಕುಮಾರ ಹೇಳಿದರು.

ಜಿಲ್ಲಾ ನ್ಯಾಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 36976 ಪ್ರಕರಣಗಳಿದ್ದು, ಅದರಲ್ಲಿ 1831 ಕೇಸ್ ಗಳನ್ನು ಈಗಾಗಲೇ ರಾಜಿಗೆ ಸೂಕ್ತ ಪ್ರಕರಣ ಎಂದು ಗುರುತಿಸಲಾಗಿದೆ. ಇನ್ನು ಹಲವು ಪ್ರಕರಣಗಳು ರಾಜಿ ಮಾಡಿಕೊಳ್ಳಬಹುದು ಎಂದು ಹೇಳಿದರು.
ಪ್ರಕರಣಗಳು ಇರುವ ಕಕ್ಷಿದಾರರು ಈ ಕಾರ್ಯಕ್ರಮದ ಪ್ರಯೋಜನ ಪಡೆಯಲು ಸ್ವಯಂ ಆಗಿ ಭಾಗವಹಿಸಿ ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಪಡೆದುಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಇದರಿಂದ ರಾಜಿಗಳು ಬೇಗ ಇತ್ಯರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.  ಒಮ್ಮೆ ಲೋಕ ಅದಾಲತ್ ಮುಂದೆ ತೀರ್ಮಾನವಾಯಿತು ಎಂದರೆ ಮತ್ತೆ ಮೇಲ್ಮನವಿಗೆ ಅವಕಾಶವಿರುವುದಿಲ್ಲ. ಪ್ರಕರಣಗಳು ಒಂದೇ ಬಾರಿಗೆ ಅಂತಿಮವಾಗಿ ಇತ್ಯರ್ಥವಾಗುತ್ತವೆ. ಹಾಗೆಯೇ ನ್ಯಾಯದ ಶುಲ್ಕ ಪಾವತಿ ಮಾಡಿರುವ ಪಾವತಿ ಶುಲ್ಕ ಸಹ ಮರು ಪಾವತಿಸಲಾಗುತ್ತದೆ ಎಂದರು.

300x250 AD

ಅನೇಕ ಪ್ರಕರಣಗಳು ಸಣ್ಣಪುಟ್ಟ ಕಾರಣಗಳಿಗಾಗಿ ರಾಜಿ ಮಾಡಿಕೊಳ್ಳದೆ ಹಾಗೆ ಮುಂದುವರಿಸಿಕೊಂಡು ಬಂದಿರುತ್ತಾರೆ. ಇದರಿಂದ ಸಮಯ, ಹಣ ಹಾಗೂ ಸಂಬಂಧದಲ್ಲಿ ಬಾಂಧವ್ಯ ಉಳಿಯುವುದಿಲ್ಲ. ರಾಜಿಯನ್ನು ಮಾಡಿಕೊಳ್ಳುವುದರಿಂದ ಸಮಯ, ಹಣದ ಜೊತೆಗೆ ಸಂಬAಧಗಳು ಉಳಿಸಿಕೊಳ್ಳುವುದಕ್ಕೆ ಸಹಾಯವಾಗುತ್ತದೆ ಎಂದು ಹೇಳಿದರು.

Share This
300x250 AD
300x250 AD
300x250 AD
Back to top