ಕಾರವಾರ: ನಂದನಗದ್ದಾದ ತೇಲಂಗರೋಡನಲ್ಲಿರುವ ಸುಮಧುರಾ ಕಟ್ಟಡದಲ್ಲಿ ಸಂಭ್ರಮಾ ಟುಟೋರಿಯಲ್ಸ ಕ್ಲಾಸ ಉದ್ಘಾಟನೆಗೊಂಡಿತು.
ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಶಿಕ್ಷಣ ನೀಡುವುದರೊಂದಿಗೆ ಉತ್ತಮ ಅಂಕಗಳನ್ನು ಪಡೆಯಲು ಇಂತಹ ಟುಟೊರಿಯಲ್ ಕ್ಲಾಸ್ ತುಂಬಾ ಸಹಕಾರಿಯಾಗುತ್ತದೆ ಎಂದು ಉದ್ಘಾಟಿಸಿದ ಜನಶಕ್ತಿ ವೇದಿಕೆಯ ಅದ್ಯಕ್ಷರಾದ ಮಾಧವ ನಾಯಕ ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪರಿಸರ ಪ್ರೇಮಿ, ಮಹಾಸತಿ ಕಾಲೇಜು ಉಳಗಾದ ನಿವೃತ್ತ ಆಂಗ್ಲ ಉಪನ್ಯಾಸಕರಾದ ಪ್ರೊ.ಎಂ.ಆರ್.ನಾಯ್ಕ ಮಾತನಾಡಿ, ಕಲಿಯುವ ವೇಳೆ ಎಷ್ಟೇ ಕಷ್ಟಗಳು ಎದುರಾದರು ಅದನ್ನು ಎದುರಿಸಿ ಹಾಗೂ ನಮ್ಮ ಗುರಿಯನ್ನು ಸಾಧಿಸುವ ಛಲ ಇದ್ದರೆ ಶಿಕ್ಷಣದಲ್ಲಿ ಉನ್ನತ ಪದವಿಯನ್ನು ಅಲಂಕರಿಸಲು ಸಾಧ್ಯವೆಂದು ನುಡಿದರು.
ಕಾರವಾರ ನಗರಸಭಾ ಸದಸ್ಯರು ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷ ಮನೋಜ ಬಾಂದೇಕರ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಇಂತಹ ಟೂಟೊರಿಯಲ್ಸ್ ಅತ್ಯವಶ್ಯಕ ಎಂದು ನುಡಿದರು. ಹಾಗೆ ವೇದಿಕೆಯ ಮೇಲೆ ಅಸಿನರಾದ ಸಿವಿಲ್ ಗುತ್ತಿಗೆದಾರರು ಆದ ಜ್ಞಾನೇಶ್ವರ ನಾಯ್ಕ ಮಾತನಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಸಲು ತಂದೆತಾಯಿ ಹಾಗೂ ಗುರುಗಳ ಪಾತ್ರ ಅತಿಮುಖ್ಯವೆಂದು ನುಡಿದರು. ಶಿಕ್ಷಣ ಪ್ರೇಮಿ ಹಾಗೂ ಸಂಪನ್ಮೂಲ ವ್ಯಕ್ತಿಗಳು ಆದ ರಮೇಶ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಗುಣಮಟ್ಟದ ಕಾಯ್ದುಕೊಳ್ಳಲು ಪಾಲಕರ ಮಾರ್ಗದರ್ಶನ ಅತ್ಯವಶ್ಯಕ ಎಂದು ನುಡಿದರು.
ಕಾರವಾರ ರಂಗಭೂಮಿ ಕಲಾವಿದರ ವೇದಿಕೆಯ ಸಂಘಟನಾ ಕಾರ್ಯದರ್ಶಿಗಳಾದ ಅಭಿಷೇಕ ಕಳಸ ಮಾತನಾಡಿ, ಕಾರವಾರದಲ್ಲಿ ಮುಂದಿನ ದಿನಗಳಲ್ಲಿ ಯು.ಪಿ.ಎಸ್.ಸಿ, ಕೆ.ಪಿ.ಎಸ್.ಸಿ ಹೀಗೇ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುವ ಕ್ಲಾಸ್ ಬರಬೇಕು ಎಂದು ನುಡಿದರು.
ಅದೇ ರೀತಿ ಸಂಭ್ರಮಾ ಟುಟೋರಿಯಲ್ಸ್ ಕ್ಲಾಸ್‌ನ ಮೇಲ್ವಿಚಾರಕರು ಆದ ನಾಗೇಂದ್ರ ಅಂಚೇಕರ ಮಾತನಾಡಿ, ಸಂಭ್ರಮಾ ಟುಟೋರಿಯಲ್ಸ್ ಕ್ಲಾಸ್ ತೆರೆಯಲು ಮೃದುಲಾ ಉ.ನಾಯ್ಕ ಹಾಗೂ ಉಮಾಕಾಂತ ನಾಯ್ಕ ಸಹಕಾರದಲ್ಲಿ ಹಾಗೂ ಇ ಭಾಗದ ಜನರ ಪ್ರೊತ್ಸಾಹದಿಂದ ಸಾಧ್ಯವಾಯಿತು. ಮೊದಲಿಗೆ ಈ ಭಾಗದ ಜನರಿಗೆ ಹಾಗೂ ಶಿಕ್ಷಣ ಪ್ರೇಮಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕಿ ನವ್ಯಾ ಅಂಚೇಕರ, ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೀತಿ ನಾಯ್ಕ, ಅನಿಶಾ ಆರ್.ನಾಯ್ಕ ಹಾಗೂ ಯಶಸ್ವಿನಿ ಮಾಧವ ನಾಯಕ, ಜನಾರ್ದನ ನಾಯ್ಕ, ರವಿ ಪಿ.ನಾಯ್ಕ ಗೋವಾ ಮತ್ತು ವಿವಿಧ ಶಾಲೆಯ ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.