ಸಿದ್ದಾಪುರ: ಹಂಗಾರಖಂಡದ ಗ್ರಾಮಸ್ಥರು ಎಲ್ಲ ಸೇರಿ ಮಳೆಗಾಲ ಪೂರ್ವ ಸಾರ್ವಜನಿಕ ಕೆಲಸವನ್ನು ಶ್ರಮದಾನದ ಮೂಲಕ ತಾವೇ ಮಾಡಿ ಗಮನ ಸೆಳೆದಿದ್ದಾರೆ. ಜೂ.11,ಭಾನುವಾರ ಬೆಳಿಗ್ಗೆ ಗಂಟೆ 9:00 ರಿಂದ ತ್ಯಾಗಲಿಯಿಂದ ಬಾಳೆಕೈ ಹಂಗಾರಖಂಡದ ವರೆಗೆ, ಹಂಗಾರಖಂಡದಿಂದ ಇಡುಕೈ, ಹಂಗಾರಖಂಡ ಗವಿನಗುಡ್ಡ ಗ್ರೂಪ್ ಶಾಲೆ ವರೆಗೆ, ಸಾಸ್ಮೇಕಟ್ಟೆ ಕೆರೆ ಕತ್ರಿವರೆಗೆ ರಸ್ತೆ ಅಕ್ಕ-ಪಕ್ಕ ಗಿಡಗಂಟಿಗಳನ್ನು ಸವರಿ, ಸ್ವಚ್ಚ ಮಾಡುವುದು, ಚರಂಡಿ ಸ್ವಚ್ಚಮಾಡುವುದು, ಮಳೆಗಾಲದ ಪೂರ್ವ ಕೆಲಸ ಮಾಡುವುದು, ಕರೆಂಟ್ ಲೈನ್ ಗೆ ತಾಗುವ ಗಿಡ-ಮರದ ಟೊಂಗೆಗಳನ್ನು ಕಡಿಯುವುದು ಮುಂತಾದ ಕೆಲಸಗಳನ್ನು ಬೆಳಿಗ್ಗಿನಿಂದ ಸಂಜೆವರೆಗೆ ಶ್ರಮದಾನ ಮಾಡಿ ತಮಗೆ ಊರಿನ ಬಗ್ಗೆ ಇರುವ ಕಾಳಜಿ, ಮಾನವಿಯತೆಯನ್ನು ಮೆರೆದಿದ್ದಾರೆ.
ಹಂಗಾರಖಂಡದ ಊರಿನ ಶ್ರೀ ನಾಗ ಚೌಡೇಶ್ವರಿ ಸೇವಾ ಸಮಿತಿಯ ಅಧ್ಯಕ್ಷರು,ಪದಾಧಿಕಾರಿಗಳು,ಸದಸ್ಯರು ಎಲ್ಲಾ ಸೇರಿ ಸುಮಾರು 35 ಜನರು ಮಳೆಗಾಲದ ಪೂರ್ವ ಕೆಲಸವನ್ನು ಮಾಡಿ ಊರಿನ ಒಗ್ಗಟ್ಟು,ಹಾಗೂ ಮಾದರಿ ಊರು ಎಂಬುದನ್ನು ತೋರ್ಪಡಿಸಿದ್ದಾರೆ.