ಗೋಕರ್ಣ: ಚಂಡಮಾರುತದ ತೀವೃತೆಗೆ ಸಣ್ಣ ಮಳೆಯೂ ಕೂಡ ಉಂಟಾಗುತ್ತಿದ್ದು, ಗಾಳಿಯ ವೇಗವೂ ಹೆಚ್ಚುತ್ತಿದೆ. ತದಡಿ, ಬೇಲೆಕಾನ, ಗೋಕರ್ಣದ ಪ್ರಮುಖ ಕಡಲ ತೀರಗಳಲ್ಲಿ ಕಡಲಬ್ಬರ ಹೆಚ್ಚುತ್ತಿದೆ. ಇದರಿಂದಾಗಿ ಪ್ರವಾಸಿಗರು ನೀರಿಗಿಳಿಯುವ ಸಾಹಸ ಮಾಡುತ್ತಿಲ್ಲ. ಹೀಗಾಗಿ ಪ್ರವಾಸಿಗರ ಸಂಖ್ಯೆಯೂ ಕೂಡ ಇಳಿಮುಖವಾಗುತ್ತಿದೆ.
ಗಂಗೆಕೊಳ್ಳ, ದುಬ್ಬನಸಸಿ, ಗೋಕರ್ಣದ ಪ್ರಮುಖ ನದಿತೀರಗಳಲ್ಲಿ ಮಳೆಗಾಲದಲ್ಲಿ ಕಡಲ್ಕೊರೆತ ಉಂಟಾಗುತ್ತದೆ. ಹೀಗಾಗಿ ಸಮುದ್ರ ತೀರದ ನಿವಾಸಿಗಳಲ್ಲಿ ಸಹಜವಾಗಿಯೇ ಮಳೆಗಾಲದಲ್ಲಿ ಆತಂಕ ಉಂಟಾಗುತ್ತಿದೆ. ಸಮುದ್ರದಿಂದ ಬೀಸುವ ಬಾರಿ ಗಾಳಿಗೆ ಗಿಡಮರಗಳನ್ನು ಧರೆಗುರುಳಿಸಿ ಹಾನಿ ಉಂಟಾಗುವುದು ಪ್ರತಿವರ್ಷದ ವಾಡಿಕೆ ಎಂಬಂತಾಗಿದೆ.
ಪ್ರವಾಸಿಗರು ಕೇವಲ ರೆಸಾರ್ಟ್, ಹೋಮ್ ಸ್ಟೇ ಇವುಗಳಲ್ಲಿ ಉಳಿದುಕೊಂಡಿದ್ದಾರೆ. ಆಗಾಗ ಉಂಟಾಗುವ ಮಳೆ, ಗಾಳಿಯ ರಭಸ ಮತ್ತು ಸಮುದ್ರದ ನೀರಿನ ಬರ‍್ಗರೆತ ಇವರನ್ನು ಎಲ್ಲಿಯೂ ಸಂಚರಿಸುವAತೆ ಮಾಡಿದೆ. ಆದರೆ ಕೆಲವರು ಮಳೆಯಲ್ಲಿಯೂ ಕೂಡ ಸಂಚಾರ ಮಾಡುವುದು, ಕಡಲಿಗಿಳಿಯುವುದು ಮಾಡುತ್ತಿದ್ದಾರೆ. ಈಗಾಗಲೇ ಪೊಲೀಸರು ಕೂಡ ಕಡಲಿಗಿಳಿಯದಂತೆ ಪ್ರವಾಸಿಗರಿಗೆ ಸೂಚಿಸಿದ್ದಾರೆ.