ಕಾರವಾರ: ಜಿಲ್ಲೆಯ ಸರಕಾರಿ ನೌಕರರ ಪತ್ತಿನ ಸಹಕಾರಿ ಸಂಘ ನಿಯಮಿತ ಕಾರವಾರ 2023 ರ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಜರುಗಿದ 10ನೇ ತರಗತಿ ಮತ್ತು ದ್ವಿತೀಯ ಪಿ ಯು ಸಿ ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗದ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಸನ್ಮಾನಿಸಿ ನಗದು ಬಹುಮಾನ ನೀಡಲಾಗುವುದು.
ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸದಸ್ಯರುಗಳು ಮಕ್ಕಳು ಮಾತ್ರ ಈ ಬಹುಮಾನಕ್ಕೆ ಅರ್ಹರಾಗಿರುತ್ತಾರೆ. ದಿನಾಂಕ 31-03-2022 ರೊಳಗಾಗಿ ಸಂಘದಲ್ಲಿ ಸದಸ್ಯರಾದವರಬೇಕು ಮಕ್ಕಳು ಮಾತ್ರ ಈ ಸೌಲಭ್ಯ ಅರ್ಹರಾಗುವವರು, ಗರಿಷ್ಠ ಅಂಕಗಳಿಸಿದ ಎಸ್ ಎಸ್ ಎಲ್ ಸಿ ಮೊದಲ 03 ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿ ದ್ವಿತೀಯ ವಾಣಿಜ್ಯ (3) ಕಲಾ (3) ವಿಜ್ಞಾನ3(3) ಹೀಗೆ ಒಟ್ಟು 04 ವಿಭಾಗಗಳಲ್ಲಿ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು.
ಆಸಕ್ತ ಸಂಘದ ಸದಸ್ಯರ ತಮ್ಮ ಮಕ್ಕಳ 10ನೇ ತರಗತಿ ಅಥವಾ ದ್ವಿತೀಯ ಪಿಯುಸಿ ಅಂಕ ಪಟ್ಟಿಯ ದೃಡಿಕೃತ ಪ್ರತಿ ಹಾಗೂ ಸಂಘದ ಸದಸ್ಯತ್ವ ಸಂಖ್ಯೆಯೊಂದಿಗೆ ಅರ್ಜಿಯನ್ನು ಸಂಘದ ಕಾರ್ಯದರ್ಶಿಗಳಿಗೆ ಜೂ 15 ರೊಳಗಾಗಿ ತಲುಪಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ :Tel:+918217879585 ,Tel:+919448729177 ಗೆ ಸಂಪರ್ಕಿಸಿ ಎಂದು ಜಿಲ್ಲಾ ಸಹಕಾರಿ ನೌಕರರ ಪತ್ತಿನ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ಸಂಜೀವಕುಮಾರ್ ಎಸ್ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.