Slide
Slide
Slide
previous arrow
next arrow

ಉತ್ತಮ ಸಮಾಜ ನಿರ್ಮಾಣಕ್ಕೆ ನಾಗರಿಕರು ಕೈಜೋಡಿಸಬೇಕು: ಪಿಎಸ್ಐ ಗಡ್ಡೇಕರ್

300x250 AD

ದಾಂಡೇಲಿ: ಯಾವುದೇ ಸಮಸ್ಯೆಗಳಾದಾಗ ಪೊಲೀಸ್ ಇಲಾಖೆಯ ಗಮನಕ್ಕೆ ತರುವುದು ಮತ್ತು ಇಲಾಖೆಯ ಸಹಕಾರವನ್ನು ಪಡೆಯುವುದು ನಾಗರಿಕರ ಕರ್ತವ್ಯವಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆಯ ಜೊತೆ ನಾಗರಿಕರು ಕೈಜೋಡಿಸಬೇಕೆಂದು ಪಿಎಸೈ ಐ.ಆರ್.ಗಡ್ಡೇಕರ್ ಕರೆ ನೀಡಿದರು.

ಸುದರ್ಶನ ನಗರದಲ್ಲಿ ನಗರ ಪೊಲೀಸ್ ಠಾಣೆಯ ಆಶ್ರಯದಡಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಕಾಪಾಡಿಕೊಂಡು ಬರುವುದೇ ಪೊಲೀಸ್ ಇಲಾಖೆಯ ಪ್ರಮುಖ ಕರ್ತವ್ಯ. ಪೊಲೀಸ್ ಇಲಾಖೆ ಜನಸ್ನೇಹಿ ಇಲಾಖೆಯಾಗಬೇಕೆಂದು ಬೀಟ್ ಪೊಲೀಸ್ ವ್ಯವಸ್ಥೆ, ಜನಸಂಪರ್ಕ ಸಭೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.

300x250 AD

ಎಎಸೈ ಬಸವರಾಜ ಒಕ್ಕುಂದ ಮಾತನಾಡಿ, ಪ್ರತಿಯೊಂದು ವಾರ್ಡಿಗೂ ಪೊಲೀಸ್ ಬೀಟ್ ವ್ಯವಸ್ಥೆಯಿದ್ದು, ಬೀಟ್ ಪೊಲೀಸರನ್ನು ನಿಯೋಜಿಸಲಾಗಿದೆ. ನಿಮ್ಮ ಪ್ರದೇಶ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ಬೀಟ್ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡುವಂತೆ ತಿಳಿಸಿದರು.
ವೇದಿಕೆಯಲ್ಲಿ ಗೃಹರಕ್ಷಕ ದಳದ ಅಧಿಕಾರಿ ಧನಾಜಿ ಕಾಂಬಳೆ, ಸ್ಥಳೀಯರಾದ ನೆಲ್ಸನ್ ಬಾಬು, ಬೀಟ್ ಪೊಲೀಸ್ ಸಿಬ್ಬಂದಿಗಳಾದ ಸಂಜಯ್ ಮತ್ತು ಸುನೀಲ್ ಮೊದಲಾದವರು ಉಪಸ್ಥಿತರಿದ್ದರು. ಸ್ಥಳೀಯರಾದ ಗೋಪಾಲ್ ಸಿಂಗ್ ರಜಪೂತ್ ಸ್ವಾಗತಿಸಿದ ಕಾರ್ಯಕ್ರಮಕ್ಕೆ ನಾಗರಾಜ ಕಲಭಾವಿ ವಂದಿಸಿದರು.

Share This
300x250 AD
300x250 AD
300x250 AD
Back to top