ಶಿರಸಿ: ಕೇಂದ್ರ ಮತ್ತು ರಾಜ್ಯ ಸರಕಾರದ ಶೈಕ್ಷಣಿಕ ಮತ್ತು ಸಾಮಾಜಿಕ ಮೀಸಲಾತಿ ಅರ್ಹತೆ ಪಡೆದು ಎರಡು ದಶಕಗಳಾದರೂ, ಇಂದಿಗೂ ರಾಜಕೀಯ ಮೀಸಲಾತಿಯಿಂದ ವಂಚಿತರಾಗಿರುವ ಕುಂಬ್ರಿ ಮರಾಠಿ ಸಮಾಜಕ್ಕೆ ರಾಜಕೀಯ ಮೀಸಲಾತಿ ಪರಿಗಣಿಸುವಂತೆ ಸಾಮಾಜಿಕ ಚಿಂತಕ ಹಾಗೂ ಹೋರಾಟಗಾರ ರವೀಂದ್ರ ನಾಯ್ಕ ಸರಕಾರಕ್ಕೆ ಅಗ್ರಹಿಸಿದ್ದಾರೆ.
ಕುಂಬ್ರಿ ಮರಾಠಿ ರಾಜಕೀಯ ಮೀಸಲಾತಿ ನೀಡುವಲ್ಲಿ ಪ್ರಮುಖ ಇಲಾಖೆಗಳಾದ ಕಾನೂನು, ಪಂಚಾಯತ ರಾಜ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಕೆ ಪಾಟೀಲ್, ಪ್ರಿಯಾಂಕ ಖರ್ಗೆ, ಹಾಗೂ ಡಾ. ಎಚ್.ಸಿ ಮಾದೇವಪ್ಪ ಅವರುಗಳಿಗೆ ಬೆಂಗಳೂರಿನ ಗೃಹ ಕಚೇರಿಯಲ್ಲಿ ಅವರು ಭೇಟ್ಟಿಯಾಗಿ ಮನವಿ ನೀಡಿ ಮೇಲಿನಂತೆ ಆಗ್ರಹಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು ಮೂವತ್ತು ಸಾವಿರದಷ್ಟು ಜನಸಂಖ್ಯೆಯಲ್ಲಿರುವ ಕುಂಬ್ರಿ ಮರಾಠಿಗಳಿಗಳು ಹಿಂದುಳಿದ ಪಟ್ಟಿಗೆ ಜನವರಿ 5,2001ರಂದು ರಾಜ್ಯ ಸರಕಾರದ ರಾಜ್ಯ ಪತ್ರದಲ್ಲಿ ಪ್ರಕಟಿಸಿದ್ದು ಇರುತ್ತದೆ. ಸಂವಿಧಾನಬದ್ಧ ಸ್ಥಳೀಯ ಸಂಸ್ಥೆ ಚುನಾವಣೆ ಮೀಸಲಾತಿ ಪಟ್ಟಿಯಲ್ಲಿ ಇಂದಿಗೂ ಸೇರಲ್ಪಡದೇ ಇರುವುದು ಖೇದಕರ ಎಂದು ಮನವಿಯಲ್ಲಿ ಅವರು ಉಲ್ಲೇಖಿಸಿದ್ದಾರೆ.
ಮುಂಬರುವ ಜಿಲ್ಲಾ ಮತ್ತು ತಾಲೂಕ ಪಂಚಾಯತ ಚುನಾವಣೆ ಪೂರ್ವ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲು ಅವರು ಸರಕಾರಕ್ಕೆ ಮನವಿಯಲ್ಲಿ ಕೋರಿದರು.
ರವೀಂದ್ರ ನಾಯ್ಕ ವಾದ :
ಕರ್ನಾಟಕ ಪ್ರಥಮ ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷರಾದ ಪೋ. ರವಿ ವರ್ಮಕುಮಾರ ಆಯೋಗದ ಮುಂದೆ ರವೀಂದ್ರ ನಾಯ್ಕ ವಾದ ಮಂಡಿಸಿರುವ ಹಿನ್ನೆಲೆಯಲ್ಲಿ ಆಯೋಗದ ಶಿಫಾರಸ್ಸಿನಂತೆ ಅಂದಿನ ಮುಖ್ಯಮಂತ್ರಿ ಎಸ್.ಎಮ್ ಕೃಷ್ಣ ಹಾಗೂ ಸಮಾಜ ಕಲ್ಯಾಣ ಸಚಿವರಾದ ಕಾಗೋಡ ತಿಮ್ಮಪ್ಪ ಅವರ ಮುತುವರ್ಜಿಯಿಂದ ಕುಂಬ್ರಿ ಮರಾಠಿ ಸಮಾಜ ಅತೀ ಹಿಂದುಳಿದ ಪಟ್ಟಿಗೆ ಸೇರಲ್ಪಟ್ಟಿರುವುದು ಉಲ್ಲೇಖನಾರ್ಹ.
ಮಧು ಬಂಗಾರಪ್ಪನವರಿಗೆ ಅಭಿನಂದನೆ :
ಪ್ರಾಥಮಿಕ ಮುತ್ತು ಪ್ರೌಢಶಾಲಾ ಸಚಿವರಾದ ಮಧು ಬಂಗಾರಪ್ಪನವರಿಗೆ ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ಇಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಅಭಿನಂದನೆ ಸಲ್ಲಿಸಿದರು.