ಕಾರವಾರ: 2023-24ನೇ ಶೈಕ್ಷಣಿಕ ಸಾಲಿನ ಬಾಲಮಂದಿರ ಶಿಶುವಿಹಾರ (ಎಲ್.ಕೆ.ಜಿ/ಯು.ಕೆ.ಜಿ) ಶಾಲೆಯು ಜೂ.05ರಂದು ಮತ್ತು ಬಾಲವಾಡಿ (ನರ್ಸರಿ) ಶಾಲೆಯು ಜೂ.12ರಂದು ಆರಂಭಗೊಳ್ಳುವ ಪ್ರಯುಕ್ತ ವಿದ್ಯಾರ್ಥಿಗಳ ಪಾಲಕರಿಗೆ ಓರಿಯಂಟೇಶನ್ ಕಾರ್ಯಕ್ರಮ ನಡೆಸಲಾಯಿತು.
ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಪಾಲಕರನ್ನು ಉದ್ದೇಶಿಸಿ ಮಾತನಾಡಿ, ನಿಮ್ಮ ಮಕ್ಕಳಿಗೆ ಪಾಠವನ್ನು ಮಾಡುವುದರ ಜೊತೆಗೆ ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವದೂ ನಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಮಾತೃಸ್ವರೂಪದ ಶಿಕ್ಷಕಿಯರು ಹಾಗೂ ಸಹಾಯಕಿಯರು ಅತ್ಯಂತ ಉತ್ಸಾಹದಿಂದ ಕಾರ್ಯನಿರ್ವಹಿಸಲಿದ್ದಾರೆ. ಪಾಲಕರಾದ ನೀವೂ ಸಹ ನಮ್ಮೊಟ್ಟಿಗೆ ಕೈಜೋಡಿಸಬೇಕು ಎಂದು ನುಡಿದರು.
ತರಬೇತಿಯಲ್ಲಿ ಮುಖ್ಯವಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಮಾರ್ಗಸೂಚಿಗಳಾದ ಮಕ್ಕಳ ಭದ್ರತೆ, ಶಾಲೆಗೆ ಬಂದು ಹೋಗುವ ವ್ಯವಸ್ಥೆ, ಸಮವಸ್ತ್ರ, ಉಪಹಾರ ವ್ಯವಸ್ಥೆ, ಹೋಮ್ ವರ್ಕ್ಗಳ ಮಾರ್ಗಸೂಚಿ ಪ್ರತಿಗಳನ್ನು ಪಾಲಕರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕೆ.ಜಿ ಮತ್ತು ನರ್ಸರಿ ತರಗತಿಗಳ ಕೋ-ಆರ್ಡಿನೇಟರ್ ಶ್ರೀಮತಿ ನೀಫಾ ಡಿ’ಸೌಜಾ ಮಾತನಾಡಿದರು. ಶಿಕ್ಷಕಿಯ ಸ್ಮಿತಾ ನಾಯ್ಕ, ಮಾಧುರಿ ಎಮ್.ನಾಯ್ಕ, ಎಲಿಜಾಬೇತ್ ಡಿಸೋಜಾ, ಜೊಸ್ಪೀನ್ ಪೆರೆರಾ, ಬೋನಿಟಾ ಫರ್ನಾಂಡೀಸ್, ಗಾಯತ್ರಿ ಮತ್ತು ಶಿಕ್ಷಕ ನಜಿರುದ್ಧೀನ್ ಸೈಯದ್ ಮೊದಲಾದವರು ಉಪಸ್ಥಿತರಿದ್ದರು.