ದಾಂಡೇಲಿ: ನಗರದಲ್ಲಿ ಕೆಲವೊಂದು ಬಹುಮುಖ್ಯ ಸಮಸ್ಯೆಗಳಿದ್ದು, ಆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶಾಸಕ ಆರ್.ವಿ. ದೇಶಪಾಂಡೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಂಘಟನೆಯ ರಾಜ್ಯ ನಿರ್ದೇಶಕ ಫಿರೋಜ್ ಫಿರ್ಜಾದೆ ಮನವಿ ಮಾಡಿದ್ದಾರೆ.
ಬಹುಮುಖ್ಯವಾಗಿ ಬೆಳೆಯುತ್ತಿರುವ ದಾಂಡೇಲಿಗೆ ಹೈಟೆಕ್ ಬಸ್ ನಿಲ್ದಾಣವನ್ನು ನಿರ್ಮಿಸಬೇಕು. ಸ್ಥಗಿತಗೊಂಡಿರುವ ದಾಂಡೇಲಿ-ಅಳ್ನಾವರ ಪ್ಯಾಸೆಂಜರ್ ರೈಲು ಪುನರಾರಂಭಿಸಬೇಕು. ನಗರದಲ್ಲಿ ನಗರ ಸಭೆಯ ಅಧೀನದಲ್ಲಿರುವ ಸಾವಿರಾರು ಮನೆಗಳನ್ನು ಅಕ್ರಮ-ಸಕ್ರಮ ಯೋಜನೆಯಡಿ ಅವರವರ ಹೆಸರಿನ ಮಾಲೀಕತ್ವಕ್ಕೆ ಮಾಡಿಕೊಡಬೇಕು. ಮುಚ್ಚಲ್ಪಟ್ಟ ಐಪಿಎಂ ಮತ್ತು ಡಿ.ಎಫ್.ಎ ಕಾರ್ಖಾನೆ ಪ್ರದೇಶದಲ್ಲಿ ರ್ಯಾಯ ಕಾರ್ಖಾನೆ ನಿರ್ಮಾಣಕ್ಕೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.