Slide
Slide
Slide
previous arrow
next arrow

ಬಾಲಕಿಗೆ ಲೈಂಗಿಕ ಕಿರುಕುಳ, ಅಪಹರಣ; ದೂರು ದಾಖಲು

300x250 AD

ಸಿದ್ದಾಪುರ: ಯುವಕನೋರ್ವ ಬಲವಂತದಿಂದ ತಮ್ಮ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿರುವುದಾಗಿ ತಂದೆಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

17 ವರ್ಷದ ಬಾಲಕಿಯು ಬಿಸಿಎಂ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಕಾಲೇಜಿಗೆ ಹೋಗಿಬರುತ್ತಿದ್ದಳು. ತಾಲೂಕಿನ ಮರದಮಠದ ರಾಘವೇಂದ್ರ ನಾಯ್ಕ ಎನ್ನುವಾತ ವಿದ್ಯುತ್ ಮೀಟರ್ ರೀಡಿಂಗ್ ಮಾಡಲು ಬಾಲಕಿಯ ಮನೆಗೆ ಬರುತ್ತಿದ್ದ. ಹೀಗೆ ಬಾಲಕಿ ಮನೆಯಲ್ಲಿರುವಾಗ ಅಪ್ರಾಪ್ತೆಯೆಂದು ಗೊತ್ತಿದ್ದೂ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಬಾಲಕಿ ಮನೆಯವರೊಂದಿಗೆ ಹೇಳಿಕೊಂಡಿದ್ದಳು.

300x250 AD

ಇದಾದ ಬಳಿಕ ಮೇ 21ರಂದು ಬಾಲಕಿ ಮನೆಯಿಂದ ಕಾಣೆಯಾಗಿದ್ದು, ಈ ವೇಳೆ ಕರೆ ಮಾಡಿದ್ದ ರಾಘವೇಂದ್ರ, ಬಾಲಕಿಯನ್ನ ಎತ್ತಿಕೊಂಡು ಹೋಗಿರುವುದಾಗಿ ತಿಳಿಸಿದ್ದಾನೆ. ಹೀಗಾಗಿ ಈತನ ವಿರುದ್ಧ ಕ್ರಮ ಕೈಗೊಂಡು, ಬಾಲಕಿಯನ್ನು ರಕ್ಷಣೆ ಮಾಡುವಂತೆ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ರಾಘವೇಂದ್ರನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕಲಂ: 8, 12 ಪೋಕ್ಸೋ ಕಾಯಿದೆ ಮತ್ತು 363 ಐಪಿಸಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top